ಅರವಿಂದ ಕೇಜ್ರಿವಾಲ್
ದೇಶ
ಕೇಜ್ರಿವಾಲ್ ಸರ್ಕಾರಕ್ಕೆ 100 ದಿನ
ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ 100 ದಿನಗಳಾಗುತ್ತಿವೆ...
ನವದೆಹಲಿ:ದೆಹಲಿಯಲ್ಲಿ ಅರವಿಂದ ಕೇಜ್ರಿವಾಲ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ 100 ದಿನಗಳಾಗುತ್ತಿವೆ.ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ದೆಹಲಿಯ ಸೆಂಟ್ರಲ್ ಪಾರ್ಕ್ ನಲ್ಲಿ ಸೋಮವಾರ 'ಜನ ಸಂವಾದ' ಏರ್ಪಡಿಸಿದೆ.
ಆಡಳಿತ ವಿಚಾರದಲ್ಲಿ ಲೆಫ್ಟಿನೆಂಟ್ ಗವರ್ನರ್ ರೊಂದಿಗಿನ ಭಿನ್ನಾಭಿಪ್ರಾಯದಿಂದ ಸುದ್ದಿಯಲ್ಲಿರುವ ಕೇಜ್ರಿವಾಲ್, ಎನ್ ಡಿಎ ಸರ್ಕಾರ, ಹಿಂಬಾಗಿಲ ಮೂಲಕ ದೆಹಲಿಯಲ್ಲಿ ಆಡಳಿತ ನಡೆಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಕಛೇರಿ ಮತ್ತು ತಮ್ಮ ದಿಲ್ಲಿ ಮುಖ್ಯಮಂತ್ರಿ ಕಚೇರಿ ನಡುವಿನ ಅಧಿಕಾರ ಹಂಚಿಕೆ ಸ್ಪಷ್ಟೀಕರಣ ನೀಡುವಂತೆ ಗೃಹ ಸಚಿವಾಲಯ ಅಧಿಸೂಚನೆ(ಎಂಎಚ್ಎ) ಹೊರಡಿಸಿರುವುದನ್ನು ಟೀಕಿಸಿದ ಅವರು, ಇದು ತನ್ನ ಪಕ್ಷದ ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳ ಬಗ್ಗೆ ಬಿಜೆಪಿಗೆ ಇರುವ ಆತಂಕ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.
ದೆಹಲಿ ಸರ್ಕಾರ ಗೃಹ ಸಚಿವಾಲಯ ಅಧಿಸೂಚನೆಗೆ ಕಾನೂನು ಅಭಿಪ್ರಾಯದ ಮೊರೆ ಹೋಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ