ಮಹಿಳೆಯರ ರಕ್ಷಣೆಗಾಗಿ ದೆಹಲಿಯ ಬಸ್ ಗಳಲ್ಲಿ 2,500 ಮಾರ್ಷಲ್ ಗಳ ನೇಮಕ

ದೆಹಲಿ ಸರ್ಕಾರ ಮಹಿಳೆಯರ ರಕ್ಷಣೆಗಾಗಿ 2,500 ಮಾರ್ಷಲ್ಸ್ ಗಳನ್ನು ನೇಮಿಸಲು ನಿರ್ಧಿರಿಸಿದೆ. ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ರಾಷ್ಟ್ರ ರಾಜದಾನಿ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಅತ್ಯಾಚಾರ ಪ್ರಕರಣ ದೇಶಾದ್ಯಾಂತ ಅಲ್ಲೋಲ ಕಲ್ಲೋಲ ಸೃಷ್ಟಿಸಿದ್ದು ಇತಿಹಾಸ. ಈಗ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ ಪ್ರಕರಣದಿಂದ ಎಚ್ಚೆತ್ತು ಕೊಂಡಿರುವ ದೆಹಲಿ ಸರ್ಕಾರ ಮಹಿಳೆಯರ ರಕ್ಷಣೆಗಾಗಿ 2,500 ಮಾರ್ಷಲ್ಸ್ ಗಳನ್ನು ನೇಮಿಸಲು ನಿರ್ಧಿರಿಸಿದೆ.
ಈಗಾಗಲೇ ದೆಹಲಿ ಸರ್ಕಾರ ಗೃಹ ರಕ್ಷಕ ದಳ ಮತ್ತು ನಾಗರಿಕ ಸೇವಾ ನೌಕರರಿಗೆ ತರಭೇತಿ ನೀಡಲಾಗುತ್ತಿದೆ. ಮಹಿಳಾ ಪ್ರಯಾಣಿಕರ ಮೇಲಾಗುವ ದೌರ್ಜನ್ಯ ಹಾಗೂ ಅಪರಾಧಗಳ ತಡೆ ಬಗ್ಗೆ ತರಭೇತಿ ನೀಡಲಾಗುತ್ತಿದೆ.
ದೆಹಲಿ ಸಾರಿಗೆ ನಿಗಮದ ಬಸ್ ಗಳಲ್ಲಿ ಸಿಸಿಟಿವಿ ಅಳವಡಿಕೆಗೂ ಕೂಡ ಸರ್ಕಾರ ಚಿಂತನೆ ನಡೆಸುತ್ತಿದೆ. ಮೊದಲ ಹಂತದಲ್ಲಿ 200 ಬಸ್ ಗಳಲ್ಲಿ ಸಿಸಿಟಿವಿ ಅಳವಡಿಸಲಾಗುವುದು.
ಮೊದಲ ಹಂತದಲ್ಲಿ  2,500 ಮಾರ್ಷಲ್ ಗಳ ನೇಮಕ ಮಾಡಲಿದ್ದು, ಪ್ರತಿ ಬಸ್ ನಲ್ಲೂ ಒಂದು ತಂಡದಂತೆ ಶೀಘ್ರವೇ ಗಸ್ತು ತಿರುಗುತ್ತಾರೆ. ಒಂದು ತಂಡದಲ್ಲಿ 3 ರಿಂದ 4 ಮಾರ್ಷಲ್ಸ್ ಇರುತ್ತಾರೆ ಎಂದು ಸಾರಿಗೆ ಸಚಿವ ಗೋಪಾಲ್ ರಾಯ್ ತಿಳಿಸಿದ್ದಾರೆ.
ಮಾರ್ಷಲ್ಸ್ ಗಳ ಸಂವಹನಕ್ಕಾಗಿ ವಾಕಿ ಟಾಕಿ ನೀಡಲಾಗುತ್ತದೆ. ಬಸ್ ನಲ್ಲಿ ಮಹಿಳಾ ಪ್ರಯಾಣಿಕರ ಮೇಲಾಗುವ ದೌರ್ಜನ್ಯ ಹಾಗೂ ಅಪರಾಧ ಪ್ರಕರಣ ಗಳನ್ನು ತಡೆಗಟ್ಟಲು ಮಾರ್ಷಲ್ ಗಳ ನೇಮಕ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com