
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಲಕ್ಷಾಂತರ ನಿವೃತ್ತ ಯೋಧರಿಗೆ ಅನುಕೂಲವಾಗುವ
`ಸಮಾನ ಪಿಂಚಣಿ' ಯೋಜನೆಯನ್ನು ಕೇಂದ್ರ ಸರ್ಕಾರ ಶೀಘ್ರ ಜಾರಿ ತರಬೇಕು. ಯುಪಿಎ ಸರ್ಕಾರವಿದ್ದ ಸಮಯದಲ್ಲೇ ಈ ಯೋಜನೆಗೆ ಸಂಬಂಧಿಸಿ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ನರೇಂದ್ರ ಮೋದಿ ಸರ್ಕಾರ ಈ ಯೋಜನೆ ಅನುಷ್ಠಾನಕ್ಕೆ ತರುವಲ್ಲಿ ಸೋತಿದೆ ಎಂದು ಆರೋಪಿಸಿದ್ದಾರೆ.
ಮೋದಿ ಸರ್ಕಾರ ಬಂದು ವರ್ಷ ಕಳೆಯಿತು. ಮಾಜಿ ಸೈನಿಕರು ಹಲವು ಬಾರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಆದರೆ ಯೋಜನೆಯಲ್ಲಿ ಯಾವುದೇ ಪ್ರಗತಿ ಕಂಡು ಬಂದಿಲ್ಲ. ಯೋಧರು ನಮ್ಮ ದೇಶ, ಗಡಿಯನ್ನು ರಕ್ಷಿಸುತ್ತಾರೆ. ಅವರ ಬೇಡಿಕೆಗಳು ಇನ್ನೂ ಈಡೇರದಿರುವುದು ವಿಪರ್ಯಾಸ. ಸಮಾನ ಹುದ್ದೆಗೆ ಸಮಾನ ಪಿಂಚಣಿ' ಮಾಜಿ ಸೈನಿಕರ ಸಂಘದ ಬಹು ದಿನಗಳ ಬೇಡಿಕೆ.
ಗಡ್ಕರಿ ತಿರುಗೇಟು
ಎನ್‍ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿರುಗೇಟು ನೀಡಿದ್ದಾರೆ. ಸರಣಿ ಸೋಲಿನಿಂದ ರಾಹುಲ್ `ಬೇಸರ'(ಮತ್ತು ನೋವಿನಲ್ಲಿದ್ದಾರೆ. ಇಂಥ ಸ್ಥಿತಿಯಲ್ಲಿ ಅವರು ಹೇಳುವ ಮಾತನ್ನು ನಾವು ಕ್ಷಮಿಸುತ್ತೇವೆ. ರಾಹುಲ್ ರಾಜಕೀಯದಲ್ಲಿ ಇಂಟರ್ನ್‍ಶಿಪ್ ಮಾಡುತ್ತಿದ್ದಾರೆಂದು ಗಡ್ಕರಿ ವ್ಯಂಗ್ಯವಾಡಿದ್ದಾರೆ.
Advertisement