

ನವದೆಹಲಿ: ದ್ವೀಪಕ್ಷೀಯ ಮಾತುಕತೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿಯೆಟ್ನಾಂನ ರಕ್ಷಣಾ ಸಚಿವ ಸೋಮವಾರ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ.
ವಿಯೆಟ್ನಾಂ ನ ರಕ್ಷಣಾ ಸಚಿವ ಜನರಲ್ ಫುಂಗ್ ಕ್ವಾಂಗ್ ತನ್ಹ್ ಅವದು ಈಗಾಗಲೇ ಮೋದಿ ಅವರಿಗೆ ಕರೆ ಮಾಡಿದ್ದು, ಭಾರತ-ವೆಯೆಟ್ನಾಂ ದೇಶಗಳ ರಕ್ಷಣೆಯ ಕುರಿತಂತೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆಂದು ಹೇಳಲಾಗುತ್ತಿದೆ.
ಭದ್ರತಾ ಸಹಕಾರ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಧನಾತ್ಮಕ ಪ್ರತಿಕ್ರಿಯೆ ನೀಡಿದ್ದು, ಮಾತುಕತೆ ವೇಳೆ ಎರಡು ದೇಶಗಳ ರಕ್ಷಣೆ ಹಾಗೂ ಭಧ್ರತೆ ಕುರಿತ ಇತ್ತೀಚಿನ ಬೆಳವಣಿಗೆ ಹಾಗೂ ಆಗ್ನೇಯ ಏಷ್ಯಾ ವಲಯದ ರಕ್ಷಣಾ ಬೆಳವಣಿಗೆಗಳ ಕುರಿತಂತೆ ಇಬ್ಬರು ನಾಯಕರು ದೂರವಾಣಿಯ ಮೂಲಕ ಚರ್ಚೆ ನಡೆಸಿದ್ದಾರೆಂದು ತಿಳಿದುಬಂದಿದೆ.