ಪಾರ್ಸೆಲ್ನಲ್ಲಿ ಬಾಂಬ್ ಇಟ್ಟ ದುಷ್ಕರ್ಮಿಗಳು: ಪಾರ್ಸೆಲ್ ತೆರೆದ ವ್ಯಕ್ತಿ ಸಾವು

ರಾಜಕೀಯ ವೈರತ್ವವೋ ಅಥವಾ ಖಾಸಗಿ ದ್ವೇಷವೋ! ಜೆಡಿಯು ಮುಖಂಡರೊಬ್ಬರಿಗೆ ದುಷ್ಕರ್ಮಿಗಳು ಪಾರ್ಸೆಲ್ ನಲ್ಲಿ ಬಾಂಬ್ ಇಟ್ಟು ಕಳುಹಿಸಿದ್ದು...
ಪಾರ್ಸೆಲ್ ಬಾಂಬ್
ಪಾರ್ಸೆಲ್ ಬಾಂಬ್

ಗಯಾ: ರಾಜಕೀಯ ವೈರತ್ವವೋ ಅಥವಾ ಖಾಸಗಿ ದ್ವೇಷವೋ! ಜೆಡಿಯು ಮುಖಂಡರೊಬ್ಬರಿಗೆ ದುಷ್ಕರ್ಮಿಗಳು ಪಾರ್ಸೆಲ್ ನಲ್ಲಿ ಬಾಂಬ್ ಇಟ್ಟು ಕಳುಹಿಸಿದ್ದು, ಈ ಪಾರ್ಸೆಲ್ ನ್ನು ತೆರೆದ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಆಡಳಿತಾರೂಢ ಜೆಡಿಯು ಮುಖಂಡರಾದ ಅಭಯ್ ಕುಶ್ವಾಹ ಅವರ ಮನೆಗೆ ಸೋಮವಾರ ಪಾರ್ಸೆಲ್ ವೊಂದನ್ನು ದುಷ್ಕರ್ಮಿಯೊಬ್ಬ ಕೊಟ್ಟು ಹೋಗಿದ್ದ. ಈ ಪಾರ್ಸೆಲ್ ಅನ್ನು ಅಭಯ್ ರ ಮನೆಕೆಲದಾಳು ಸಂತೋಷ್ ಕುಮಾರ್ ತೆರೆದಿದ್ದು, ಪಾರ್ಸೆಲ್ ನಲ್ಲಿದ್ದ ಬಾಂಬ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಸ್ಫೋಟ ಮಾಹಿತಿ ತಿಳಿಯುತ್ತಿದಂತೆ ಸ್ಥಳಕ್ಕೆ ಬಂದ ಪೊಲೀಸರು ಮನೆಗೆ ಬೀಗಿ ಭದ್ರತೆ ಒಗದಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಸದ್ಯ ಪಾರ್ಸೆಲ್ ಕಳಿಸಿದ ವ್ಯಕ್ತಿಗಳ ಕುರಿತು ಇನ್ನೂ ಮಾಹಿತಿ ಲಭ್ಯವಾಗಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com