
ಬೆಂಗಳೂರು: ಪೊಲೀಸ್ ಠಾಣೆಯಲ್ಲಿ ಇಸ್ಪೀಟ್ ಆಡುತ್ತಿದ್ದ ಇಬ್ಬರು ಪೇದೆಗಳನ್ನು ಬೆಂಗಳೂರು ಪೂರ್ವ ವಿಬಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹರಿಶೇಖರನ್ ಬುಧವಾರ ಅಮಾನತು ಮಾಡಿದ್ದಾರೆ.
ಜೂಜಾಡುವ ಸಾಮಾನ್ಯ ಜನರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಪೊಲೀಸರೇ ಠಾಣೆಯಲ್ಲಿ ಜೂಜಾಡುತ್ತಿರುವ ದೃಶ್ಯವೊಂದನ್ನು ಸುದ್ದಿ ಮಾಧ್ಯಮಗಳು ನಿನ್ನೆ ಪ್ರಸಾರ ಮಾಡಿತ್ತು.
ಸುದ್ದಿ ಮಾಧ್ಯಮಗಳ ಈ ದೃಶ್ಯವನ್ನು ಕಂಡ ಪೊಲೀಸ್ ಇಲಾಖೆಯು, ಪೇದೆಗಳ ವಿರುದ್ಧ ಇಂದು ಕ್ರಮ ಕೈಗೊಂಡಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪೇದೆಗಳನ್ನು ಅಮಾತು ಮಾಡಿ ಆದೇಶ ಹೊರಡಿಸಿದೆ ಎಂದು ಹೇಳಲಾಗುತ್ತಿದೆ. ಹಳೇ ಏರ್ ಪೋರ್ಟ್ ಪೊಲೀಸ್ ಠಾಣೆಯ ಮುಖ್ಯ ಪೇದೆ ಸದಾಶಿವ ಮತ್ತು ಧನಂಜಯ ಅಮಾನತುಗೊಂಡ ಪೇದೆಗಳಾಗಿದ್ದಾರೆ.
Advertisement