
ಫಿಲಿಬಿಟ್: ವರದಕ್ಷಿಣ ಹಣಕ್ಕಾಗಿ ಪೀಡಿಸುತ್ತಿದ್ದ ದೂರ್ತ ಪತಿಯೊಬ್ಬ ತನ್ನ ಪತ್ನಿಯ ಮೂಗನ್ನೇ ಕತ್ತರಿಸಿ ಹಾಕಿರುವ ವಿದ್ರಾವಕ ಘಟನೆ ಉತ್ತರ ಪ್ರದೇಶದ ಫಿಲಿಬಿಟ್ ನಲ್ಲಿ ನಡೆದಿದೆ.
ಮಹಾಭಾರತದಲ್ಲಿ ಒಂದು ಸನ್ನಿವೇಶ ಬರುತ್ತದೆ ಸೀತೆಯನ್ನು ಕೊಲ್ಲಲು ಬಂದ ರಾವಣನ ಸಹೋದರಿ ಶೂರ್ಪಣಖಿಯ ಮೂಗನ್ನು ರಾಮನ ಸಹೋದರ ಲಕ್ಷ್ಮಣ ಕತ್ತರಿಸಿ ಹಾಕುತ್ತಾನೆ. ಆದರೆ ಇಲ್ಲೊಬ್ಬ ದೂರ್ತ ರಾವಣನೊಬ್ಬ ವರದಕ್ಷಿಣೆ ಹಣಕ್ಕೆ ದೂರಾಸೆ ಪಟ್ಟು ಕಟ್ಟಿಕೊಂಡ ಹೆಂಡತಿಯ ಮೂಗನ್ನೇ ಕತ್ತರಿಸಿ ಹಾಕಿದ್ದಾನೆ. ಫಿಲಿಬಿಟ್ ನ ಅಹ್ಮದ್ ಪುರದ ನಿವಾಸಿಯಾದ ಜಹನ್ ಇ ಆಲಂ ಎಂಬ ವ್ಯಕ್ತಿ ಕಳೆದ ಹಲವು ದಿನಗಳಿಂದ ವರದಕ್ಷಿಣೆ ಹಣವನ್ನು ತರುವಂತೆ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದನು. ಇಂದು ಕೂಡ ಈ ಬಗ್ಗೆ ತನ್ನ ಪತ್ನಿಯೊಂದಿಗೆ ಜಗಳಕ್ಕಿಳಿದಿದ್ದಾನೆ. ಜಗಳ ತಾರಕ್ಕೇರಿ ಪತ್ನಿ ವಿರುದ್ಧ ಆಕ್ರೋಶಗೊಂಡ ಆತ ಆಕೆಯ ಮೂಗು ಮತ್ತು ತಲೆ ಕೂದಲನ್ನು ಕತ್ತರಿಸಿ ಹಾಕಿದ್ದಾನೆ.
ಪ್ರಸ್ತುತ ಆತನ ಪತ್ನಿ ಪೂರನ್ ಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ವಿಚಾರ ಬಹಿರಂಗವಾಗುತ್ತಿದ್ದಂತೆಯೇ ದೂರ್ತ ಪತಿ ನಾಪತ್ತೆಯಾಗಿದ್ದಾನೆ. ಮಹಿಳೆಯ ಪೋಷಕರು ಆಲಂ ವಿರುದ್ಧ ಪೊಲೀಸರಲ್ಲಿ ದೂರಿದ್ದು, ಗೃಹ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣದಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
ಇನ್ನು ಸ್ಥಳೀಯರು ಹೇಳುವಂತೆ ಆಲಂನ ಪತ್ನಿ ಪೋಷಕರು ಆತನಿಗೆ 20 ಸಾವಿರ ನಗದು ಮತ್ತು ಒಂದು ಬೈಕ್ ನೀಡುವುದಾಗಿ ಹೇಳಿದ್ದರು. ಇದೇ ವಿಚಾರವಾಗಿ ಆಲಂ ಪ್ರತಿನಿತ್ಯ ತನ್ನ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಇಂದು ಜಗಳ ತಾರಕಕ್ಕೇರಿ ಆಲಂ ತನ್ನ ಪತ್ನಿಯ ಮೂಗು ಮತ್ತು ಕೂದಲನ್ನು ಕತ್ತರಿಸಿ ಹಾಕಿದ್ದಾನೆ ಎಂದು ಹೇಳಿದ್ದಾರೆ. ಆರೋಪಿ ಆಲಂ ನಾಪತ್ತೆಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.
Advertisement