
ನವದೆಹಲಿ: ವೆಬ್ ಸೈಟ್ ಕ್ರ್ಯಾಶ್ ಆಗಿರುವ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 2 ಗಂಟೆಗೆ ಪ್ರಕಟವಾಗಬೇ ಕಿದ್ದ ಸಿಬಿಎಸ್ ಇ ಹತ್ತನೇ ತರಗತಿ ಫಲಿತಾಂಶ 4 ಗಂಟೆಗೆ ಪ್ರಕಟವಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ.
ಮಧ್ಯಾಹ್ನ 1.50ಕ್ಕೆ ವೆಬ್ ಸೈಟ್ ಕ್ರ್ಯಾಶ್ ಆಯಿತು. ಹಾಗಾಗಿ ನಿಗದಿತ ಸಮಯಕ್ಕೆ ಫಲಿತಾಂಶ ಪ್ರಕಟವಾಗಲಿಲ್ಲ. ಈ ಬಗ್ಗೆ ಸಿಬಿಎಸ್ ಇಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ವಿದ್ಯಾರ್ಥಿಗಳು ತಮ್ಮ ಫಲಿತಾಂಶ ತಿಳಿಯಲು cbseresults.nic.in ಮತ್ತು cbse.nic.inಗೆ ಲಾಗ್ ಇನ್ ಆಗಬಹುದು. ಎಸ್ಎಂಎಸ್ ಮತ್ತು ಐವಿಆರ್ ಎಸ್ ಮೂಲಕವೂ ಫಲಿತಾಂಶ ತಿಳಿದುಕೊಳ್ಳಬಹುದು.
ಈ ವರ್ಷ ಒಟ್ಟು 13 ಲಕ್ಷಕ್ಕೂ ಅಧಿಕ ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
Advertisement