10 ರೂಪಾಯಿ ನೋಟಿನಿಂದ ಮಹಾತ್ಮ ಗಾಂಧಿ ನಾಪತ್ತೆ

ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸುತ್ತಿರುವ 10 ರೂಪಾಯಿ ನೋಟುಗಳಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಚಿತ್ರ ನಾಪತ್ತೆಯಾಗಿದೆ...
ಹೊಸದಾಗಿ ಮುದ್ರಣವಾಗಿರುವ 10 ರೂಪಾಯಿ ನೋಟು
ಹೊಸದಾಗಿ ಮುದ್ರಣವಾಗಿರುವ 10 ರೂಪಾಯಿ ನೋಟು

ವಿಜಯವಾಡ: ಆಶ್ಚರ್ಯವಾದರೂ ಇದು ಸತ್ಯ. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮುದ್ರಿಸುತ್ತಿರುವ 10 ರೂಪಾಯಿ ನೋಟಿನಿಂದ ರಾಷ್ಟ್ರಪಿತ ಮಹಾತ್ಮಗಾಂಧಿ ಚಿತ್ರ ನಾಪತ್ತೆಯಾಗಿದೆ. ಗಾಂಧೀಜಿ ಇಲ್ಲದ 10 ರೂಪಾಯಿ ನೋಟನ್ನು ಆರ್ ಬಿಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

1996 ರ ಜೂನ್ ನಿಂದ  10 ರೂಪಾಯಿ ನೋಟುಗಳಲ್ಲಿ ಗಾಂಧಿ ಮುಖ ಇರುವ ಭಾವಚಿತ್ರವನ್ನು ಮುದ್ರಿಸಲಾಗುತ್ತಿತ್ತು.  2001 ರಲ್ಲಿ 5 ರೂಪಾಯಿ ನೋಟಿನಲ್ಲಿ ಗಾಂಧಿ ಚಿತ್ರವನ್ನು ಮುದ್ರಣ ಮಾಡಲಾಗುತ್ತಿತ್ತು. 1997 ರಿಂದ 500 ರೂಪಾಯಿ ನೋಟಿನಲ್ಲಿ ಗಾಂಧಿ ಚಿತ್ರವನ್ನು ಹಾಕಲಾಗುತ್ತಿತ್ತು. .

ಹೊಸದಾಗಿ ಮುದ್ರಣವಾಗುತ್ತಿರುವ 10 ರೂಪಾಯಿ ನೋಟಿನಲ್ಲಿ ಸಿಂಹ ಹಾಗೂ ಅಶೋಕ ಸ್ಥಂಭ ಮಾತ್ರವಿದೆ. ಗಾಂಧೀಜಿ ಇಲ್ಲದ 10 ರೂಪಾಯಿ ನೋಟನ್ನು ಪಡೆದ ಜನ ಇದು ನಕಲಿಯೋ ಅಸಲಿಯೋ ಎಂದು ತಿಳಿಯಲು ವಿಜಯವಾಡದ ಸ್ಥಳೀಯ ಎಸ್ ಬಿಐ ನಲ್ಲಿ ವಿಚಾರಿಸಿದ್ದಾರೆ. ಇದು ಅಸಲಿ ನೋಟು. ಇತ್ತೀಚೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ನೋಟುಗಳನ್ನು ಮುದ್ರಿಸಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೈದ್ರಾಬಾದ್ ಪ್ರಧಾನ ವ್ಯವಸ್ಥಾಪಕ ಗೋವಿಂದರಾವ್ ತಿಳಿಸಿದ್ದಾರೆ.

10 ರೂಪಾಯಿ ನೋಟಿನಿಂದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಚಿತ್ರವನ್ನು ತೆಗೆದು ಹಾಕಿದ ಆರ್ ಬಿಐ ಮುಂದೊಂದು ದಿನ ಎಲ್ಲಾ ನೋಟುಗಳಿಂದಲೂ ಗಾಂಧೀಜಿ ಚಿತ್ರಕ್ಕೆ ಗೇಟ್ ಪಾಸ್ ನೀಡುತ್ತದೆಯೇನೋ ಎಂಬುದು ಸದ್ಯದ ಕುತೂಹಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com