ಮ್ಯಾಗಿಯಲ್ಲಿ ಅಧಿಕ ಪ್ರಮಾಣದ ಸೀಸ: ಶೀಘ್ರವೇ ನೆಸ್ಟ್ಲೆ ಕಂಪನಿ ವಿರುದ್ದ ಕಾನೂನು ಕ್ರಮ

ಮಕ್ಕಳೆ ಹೆಚ್ಚಾಗಿ ತಿನ್ನುವ ಮ್ಯಾಗಿಯಲ್ಲಿ ಅನುಮತಿ ನೀಡಿದ್ದಕ್ಕಿಂತ ಅಪಾಯಕಾರಿ ಪ್ರಮಾಣದಲ್ಲಿ ಸೀಸ ಬಳಕೆ ಮಾಡಿದ ಪರಿಣಾಮ.....
ಮ್ಯಾಗಿ ನೂಡಲ್ಸ್
ಮ್ಯಾಗಿ ನೂಡಲ್ಸ್

ಉತ್ತರ ಪ್ರದೇಶ: ಮಕ್ಕಳೆ ಹೆಚ್ಚಾಗಿ ತಿನ್ನುವ ಮ್ಯಾಗಿಯಲ್ಲಿ ಅನುಮತಿ ನೀಡಿದ್ದಕ್ಕಿಂತ ಅಪಾಯಕಾರಿ ಪ್ರಮಾಣದಲ್ಲಿ ಸೀಸ ಬಳಕೆ ಮಾಡಿದ ಪರಿಣಾಮ ಶೀಘ್ರವೇ ನೆಸ್ಲ್ಟೆ ಕಂಪನಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಉತ್ತರ ಪ್ರದೇಶದ ಆಹಾರ ಸುರಕ್ಷೆ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರ ಪ್ರದೇಶದ ಬಾರಬಂಕಿ ಜಿಲ್ಲೆಯ ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಕೋರ್ಟ್ ನಲ್ಲಿ ದೂರು ದಾಖಲಿಸಲು ಸಿದ್ಧತೆ ನಡೆಸುತ್ತಿರುವುದಾಗಿ ತಿಳಿಸಿದೆ.

ಆದರೆ ನೆಸ್ಟ್ಲೆ ಇಂಡಿಯಾದ ಅಧಿಕಾರಿಗಳು ಇದಕ್ಕೆ ಸ್ಪಷ್ಟನೆ ನೀಡಿದ್ದಾರೆ. ಮ್ಯಾಗಿಯಲ್ಲಿ ನಾವು ಮೊನೋಸೋಡಿಯಂ ಗ್ಲುಕೋಮೇಟ್ ಬಳಸಿಲ್ಲ, ನೈಸರ್ಗಿಕವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಸಿದ್ದೇವೆ. ಪ್ರತಿನಿತ್ಯ ನಾವು ಸೇವಿಸುವ ಟಮೊಟೋ, ಬಟಾಣಿ, ಪನ್ನೀರ್ ಈರುಳ್ಳಿ ಮತ್ತು ಹಾಲಿನಲ್ಲೂ  ಮೊನೋಸೋಡಿಯಂ ಗ್ಲುಕೋಮೇಟ್ ಅಂಶವಿರುತ್ತದೆ. ಹೀಗಾಗಿ ಇದು ಕೆಟ್ಟದಲ್ಲ ಎಂದು ಹೇಳಿಕೆ ನೀಡಿ ಸಮರ್ಥಿಸಿಕೊಂಡಿದ್ದಾರೆ.

ಜೊತೆಗೆ ಮಾರ್ಚ್ 2014 ರಂದು ತಯಾರಿಸಲ್ಪಟ್ಟಿರುವ ಮ್ಯಾಗಿ ಪಾಕೆಟ್ ಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ ಎಂದು ನೆಸ್ಲ್ಟೆ ಕಂಪನಿಯ ವಕ್ತಾರರು ಹೇಳಿದ್ದಾರೆ.
ಉತ್ತರ ಪ್ರದೇಶದ ನಂತರ ಮಹಾರಾಷ್ಟ್ರ, ಗುಜರಾತ್ ಸೇರಿದಂತೆ ಇವ್ವು ಹಲವು ರಾಜ್ಯಗಳಲ್ಲಿ ಮ್ಯಾಗಿ ನೂಡಲ್ಸ್ ಪಾಕೆಟ್ ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿದೆ, ಪ್ರಯೋಗಲಾಯಂದ ವರದಿಗಾಗಿ ಕಾಯುತ್ತಿರುವುದಾಗಿ ಆಹಾರ ಸುರಕ್ಷತೆ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ಅಧಿಕಾರಿಗಳು ತಿಳಿಸಿದ್ದಾರೆ.




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com