ಕೇರಳಕ್ಕೆ ಮುಂದಿನ ವಾರ ಮಾನ್ಸೂನ್ ಪ್ರವೇಶ

ದೇಶಾದ್ಯಂತ ಉರಿ ಬಿಸಿಲಿನ ತಾಪಕ್ಕೆ ತತ್ತರಿಸಿ ಇದುವರೆಗೆ 2005 ಮಂದಿ ಸಾವನ್ನಪ್ಪಿದ್ದಾರೆ. ಜೊತೆಗೆ ಕೆಲವೆಡೆ ಮುಂಗಾರು ಪೂರ್ವ ಮಳೆಗೆ ಹಲವುಮಂದಿ ಬಲಿಯಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ತಿರುವನಂತಪುರ: ದೇಶಾದ್ಯಂತ ಉರಿ ಬಿಸಿಲಿನ ತಾಪಕ್ಕೆ ತತ್ತರಿಸಿ ಇದುವರೆಗೆ 2005 ಮಂದಿ ಸಾವನ್ನಪ್ಪಿದ್ದಾರೆ.  ಜೊತೆಗೆ ಕೆಲವೆಡೆ ಮುಂಗಾರು ಪೂರ್ವ ಮಳೆಗೆ ಹಲವುಮಂದಿ ಬಲಿಯಾಗಿದ್ದಾರೆ.
ಬಿಸಿಲಿನಿಂದ ಬಸವಳಿದಿರುವ ರಾಜ್ಯಗಳಿಗೆ ತಂಪನ್ನೆರೆಯಲು ಮುಂದಿನ ವಾರ ಮುಂಗಾರು ಮಾನ್ಸೂನ್ ಮಾರುತ್ ವಿವಿಧ ರಾಜ್ಯಗಳಿಗೆ ಪ್ರವೇಶಿಸಲಿದೆ.

ವಾಯುವ್ಯ ಮುಂಗಾರು ಮಾರುತ ಮುಂದಿನ ವಾರ ಅಂದರೆ ಜೂನ್ 3 ರ ಒಳಗೆ  ಕೇರಳಕ್ಕೆ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಮುಂದಿನ 24 ಗಂಟೆಗಳಲ್ಲಿ ನೈರುತ್ಯ ದಿಕ್ಕಿನಿಂದ ಪ್ರಬಲ ಗಾಳಿ ಬೀಸಲಿದೆ. ಗಂಟೆಗೆ 45 ರಿಂದ 55 ಕೀಮೀ ವೇಗದಲ್ಲಿ ಬೀಸುವ ಗಾಳಿ ಕೇರಳದ ಕರಾವಳಿ ಮತ್ತು ಲಕ್ಷ ದ್ವೀಪಕ್ಕೆ ಅಪ್ಪಳಿಸಲಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ತೆರಳಬಾರದೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ತೆಲಂಗಾಣ, ತಮಿಳುನಾಡು, ಆಂಧ್ರ ಪ್ರದೇಶ, ಪುದುಚೆರಿ ಹಾಗೂ ಕರ್ನಾಟಕದಲ್ಲಿ ಮುಂದಿನ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com