
ನವದೆಹಲಿ: ತೀವ್ರ ಸುದ್ದಿಗೆ ಗ್ರಾಸವಾಗಿದ್ದ ಮತ್ತು ವಿಪಕ್ಷಗಳು ತೀವ್ರ ಪ್ರತಿರೋಧ ತೋರಿದ್ದ ವಿವಾದಿತ ಭೂಸ್ವಾಧೀನ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಭಾನುವಾರ ಅಂಕಿತ ಹಾಕಿದ್ದಾರೆ.
2 ಬಾರಿ ವಿಫಲವಾಗಿದ್ದ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಮತ್ತೆ ಹೊರಡಿಸಬೇಕು ಎಂದು ಶನಿವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ಶಿಫಾರಸ್ಸು ಮಾಡಿತ್ತು. ಇತ್ತೀಚೆಗಷ್ಟೇ ಸಂಸತ್ತಿನ ಜಂಟಿ ಸಮಿತಿಯ ಸಮಿತಿಯ ಪರಿಶೀಲನೆಗೆ ಒಪ್ಪಿಸಿದ್ದ ತಿದ್ದುಪಡಿ ಸಹಿತ ಕಾಯ್ದೆ ಜಾರಿಗೆ ಮೂರನೇ ಬಾರಿಗೆ ಅಂಕಿತ ಹಾಕುವಂತೆ ರಾಷ್ಟ್ರಪತಿಗಳಿಗೆ ಸಚಿವ ಸಂಪುಟ ಸಭೆ ಶಿಫಾರಸು ಮಾಡಿತ್ತು. ಈ ಹಿನ್ನಲೆಯಲ್ಲಿ ಭಾನುವಾರ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ತಿದ್ದುಪಡಿ ಭೂಸ್ವಾಧೀನ ಸುಗ್ರೀವಾರಜ್ಞೆಗೆ ಅಂಕಿತ ಹಾಕಿದ್ದಾರೆ.
ಈ ಹಿಂದೆ ಮಾರ್ಚ್ ನಲ್ಲಿ ಹೊರಡಿಸಲಾಗಿದ್ದ ಭೂಸ್ವಾಧೀನ ಸುಗ್ರೀವಾಜ್ಞೆಯ ಅವಧಿಯು ಜೂನ್ 4ಕ್ಕೆ ಅಂದರೆ ಏಪ್ರಿಲ್ 23ರಂದು ಅಂತ್ಯಗೊಂಡಿತ್ತು. ಅಧಿವೇಶನದಲ್ಲಿ ಸುಗ್ರೀವಾಜ್ಞೆಯ ಬದಲಿಗೆ ಕಾನೂನನ್ನು ಅಂಗೀಕರಿಸಬೇಕಾಗಿತ್ತು. ಆದರೆ ವಿರೋಧ ಪಕ್ಷಗಳ ತೀವ್ರ ವಿರೋಧದ ಕಾರಣದಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ವಿಚಾರವನ್ನು ಶನಿವಾರ ನಡೆದ ಕೇಂದ್ರ ಸಚಿವ ಸಂಪುಟದ ಕಾರ್ಯಸೂಚಿಯಲ್ಲಿ ಸೇರಿಸಲಾಗಿತ್ತು .
ಪ್ರಸ್ತುತ ಜಾರಿಯಲ್ಲಿ ಇರುವ ಭೂಸ್ವಾಧೀನ ಸುಗ್ರೀವಾಜ್ಞೆಯನ್ನು ಆಧರಿಸಿದ ಭೂಸ್ವಾಧೀನ ಮಸೂದೆಯನ್ನು ಜಂಟಿ ಸಂಸದೀಯ ಸಮಿತಿಯು ಪರಿಶೀಲಿಸುತ್ತಿರುವುದರಿಂದ ಸುಗ್ರೀವಾಜ್ಞೆಯನ್ನು ಮರು ಜಾರಿ ಮಾಡಬಹುದು ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಸ್ತಾವ ಮುಂದಿಟ್ಟಿತ್ತು.
Advertisement