ಐಟಿಆರ್ ಫೋರಂ ಇನ್ನು ಮೂರೇ ಪುಟ

ಐಟಿ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರಿಗೆ ಖುಷಿಯ ಸುದ್ದಿ. ಇನ್ನು ಮುಂದೆ ನೀವು 12 ಪುಟಗಳ ಫಾರಂ ಭರ್ತಿ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ...
ಐಟಿ ರಿಟರ್ನ್ಸ್
ಐಟಿ ರಿಟರ್ನ್ಸ್

ನವದೆಹಲಿ: ಐಟಿ ರಿಟರ್ನ್ಸ್ ಸಲ್ಲಿಸುವ ತೆರಿಗೆದಾರರಿಗೆ ಖುಷಿಯ ಸುದ್ದಿ. ಇನ್ನು ಮುಂದೆ ನೀವು 12 ಪುಟಗಳ ಫಾರಂ ಭರ್ತಿ ಮಾಡಬೇಕಾದ ಅಗತ್ಯವಿಲ್ಲ. ಏಕೆಂದರೆ, ಕೇಂದ್ರ ಸರ್ಕಾರ ಐಟಿಆರ್ ಫಾರಂ ಅನ್ನು 3 ಪುಟಕ್ಕೆ ಸೀಮಿತಗೊಳಿಸಿದೆ.
ಭಾನುವಾರ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು 3 ಪುಟಗಳ ಐಟಿಆರ್ ಫಾರಂ ಅನ್ನು ಬಿಡುಗಡೆ ಮಾಡಿದ್ದಾರೆ. ಜತೆಗೆ, ರಿಟರ್ನ್ಸ್  ಸಲ್ಲಿಸುವ ಕೊನೇ ದಿನಾಂಕವನ್ನು ಆಗಸ್ಟ್ 31ರವರೆಗೆ ವಿಸ್ತರಿಸಿದ್ದಾರೆ. ಅಷ್ಟೇ ಅಲ್ಲ, ವಿದೇಶ ಪ್ರಯಾಣದ ಬಗೆಗಿನ ಮತ್ತು ಬಳಸದೇ ಇದ್ದ ಬ್ಯಾಂಕ್ ಖಾತೆ ಬಗೆಗಿನ ವಿವರ ನೀಡಬೇಕೆಂಬ ವಿವಾದಾತ್ಮಕ ಅಂಶವನ್ನು ಕೈಬಿಟ್ಟಿರುವುದಾಗಿಯೂ ಅವರು ಘೋಷಿಸಿದ್ದಾರೆ. ಆದರೆ, ತೆರಿಗೆದಾರರು ತಮ್ಮ ಪಾಸ್‍ಪೋರ್ಟ್ ಸಂಖ್ಯೆ ಮತ್ತು ಸಕ್ರಿಯ ಬ್ಯಾಂಕ್ ಖಾತೆಗಳ ವಿವರಗಳನ್ನು ಒದಗಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಈವರೆಗೆ ತೆರಿಗೆದಾರರು 12 ಪುಟಗಳ ಐಟಿಆರ್ ಅರ್ಜಿಯನ್ನು ತುಂಬಬೇಕಾಗಿತ್ತು. ಪ್ರಸಕ್ತ ವರ್ಷಾರಂಭದಲ್ಲಿ 12ರ ಬದಲಾಗಿ 14 ಪುಟಗಳ ಫಾರಂಗಳನ್ನು ಪರಿಚಯಿಸುವ ಪ್ರಸ್ತಾಪವಿತ್ತು. ಆದರೆ, ಇದಕ್ಕೆ ಉದ್ಯಮಿಗಳು, ಸಂಸದರು ಸೇರಿದಂತೆ ಅನೇಕರು ವಿರೋಧ ವ್ಯಕ್ತಪಡಿಸಿದ್ದರು. ಈ ಅರ್ಜಿಯಲ್ಲಿ ವಿದೇಶ ಪ್ರಯಾಣ, ಬಳಸದೇ ಇರುವ ಖಾತೆ ಮತ್ತಿತರ ಅನಗತ್ಯ ವಿವರಗಳನ್ನು ನೀಡಬೇಕಾದ್ದರಿಂದ ತೆರಿಗೆದಾರ ರಿಗೆ ಬಹಳಷ್ಟು ಹೊರೆಯಾಗಲಿದೆ ಎನ್ನುವುದು ಅವರ ಆರೋಪವಾಗಿತ್ತು. ಈ ವಿವಾದದ ಹಿನ್ನೆಲೆಯಲ್ಲಿ ಪ್ರಸ್ತಾಪವನ್ನು ಕೈಬಿಟ್ಟ ಸರ್ಕಾರ, 3 ಪುಟಗಳ ಅರ್ಜಿಯನ್ನು ಪರಿಚಯಿಸಿದೆ. ಜೂನ್ ತಿಂಗಳ 3ನೇ ವಾರದಲ್ಲಿ ಈ ಫಾರಂಗಳು ಇ-ಫೈಲಿಂಗ್‍ಗೆ ಲಭ್ಯವಿರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com