
ನವದೆಹಲಿ: ಉತ್ತರ ಪ್ರದೇಶ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಪರೀಕ್ಷೆಯಿಂದ ಮ್ಯಾಗಿಯಲ್ಲಿ ಹೆಚ್ಚಿನ ಪ್ರಮಾಣ ಸೀಸದ ಅಂಶವಿದೆ ಎಂದು ತಿಳಿದ ಮೇಲೆ ದೇಶದ ಇನ್ನಿತರ ರಾಜ್ಯ ಸರ್ಕಾರಗಳು ಎಚ್ಚೆತ್ತುಕೊಂಡಿವೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಹಲವು ರಾಜ್ಯಗಳು ಮ್ಯಾಗಿ ಸ್ಯಾಂಪಲ್ಸ್ ತರಿಸಿ ಪರೀಕ್ಷೆ ನಡೆಸುತ್ತಿದ್ದು ಇನ್ನು ಎರಡು ಮೂರು ದಿನಗಳಲ್ಲಿ ಪೂರ್ಣ ಪ್ರಮಾಣದ ವರದಿ ಬರಲಿದೆ.
ಮತ್ತೊಂದು ಬೆಳವಣಿಗೆಯಲ್ಲಿ ಮ್ಯಾಗಿ ಬ್ರ್ಯಾಂಡ್ ಅಂಬಾಸಿಡರ್ ಕೂಡ ಹೊಣೆಗಾರರಾಗಿರುತ್ತಾರೆ ಎಂದು ತಿಳಿಸಿದೆ, ಉತ್ಪನ್ನಗಳ ಬಗ್ಗೆ ಜಾಹೀರಾತಿನಲ್ಲಿ ನಟಿಸುವ ಅವರು ಗ್ರಾಹಕರ ದಾರಿತಪ್ಪಿಸುತ್ತಾರೆ. ಹೀಗಾಗಿ ಅವರು ಕೂಡ ಹೊಣೆಗಾರಾಗಿರುತ್ತಾರೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ ಪತ್ರ ಬರೆದಿದ್ದು ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಆಹಾರ ಗ್ರಾಹಕ ವ್ಯವಹಾರಗಳ ಸಚಿವ ರಾಮ್ ವಿಲಾಸ್ ಪಾಸ್ವಾನ್ ತಿಳಿಸಿದ್ದಾರೆ.
ಮ್ಯಾಗಿಯಲ್ಲಿ ಅಗತ್ಯಕ್ಕಿಂತ ಸೀಸದ ಪ್ರಮಾಣ ಹೆಚ್ಚು ಇರುವ ವಿವಾದದ ಬಗ್ಗೆ ಆಹಾರ ಮತ್ತು ಬಳಕೆದಾರರ ಸಂಘಕ್ಕೆ ಇದುವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಎಲ್ಲಾ ಮಾನದಂಡಗಳಲ್ಲೂ ಮ್ಯಾಗಿಯನ್ನು ಪರೀಕ್ಷಿಸಲಾಗುತ್ತದೆ. ಒಂದು ವೇಳೆ ನಿಯಮ ಉಲ್ಲಂಘನೆಯಾಗಿದ್ದರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ಕಠಿಣ ಕ್ರಮ ಕೈಗೊಳ್ಳಲಿದೆ, ಜೊತೆಗೆ ಬ್ರಾಂಡ್ ಆಂಬಾಸಿಡರ್ ವಿರುದ್ದವೂ ಕ್ರಮ ಜರುಗಿಸಲಾಗುವುದು ಎಂದು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಜಿ. ಗುರುಚರಣ್ ತಿಳಿಸಿದ್ದಾರೆ,
Advertisement