ಬದಲಾಗಲಿದೆ ಆರ್‏ಎಸ್ಎಸ್ ಸಮವಸ್ತ್ರ?

ದಶಕಗಳ ಕಾಲ ತನ್ನ ಇತಿಹಾಸವನ್ನು ಕಾಪಾಡಿಕೊಂಡು ಬಂದಿರುವ ಆರ್‏ಎಸ್ಎಸ್ ಇದೀಗ ಸಮವಸ್ತ್ರವಾದ ಖಾಕಿ ಚಡ್ಡಿಯ ಬದಲು ಪ್ಯಾಂಟ್ ಗೆ ಬದಲಿಸಲು ಚಿಂತನೆ ನಡೆಸುತ್ತಿದೆ ಎಂದು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನಾಗ್ಪುರ: ದಶಕಗಳ ಕಾಲ ತನ್ನ ಇತಿಹಾಸವನ್ನು ಕಾಪಾಡಿಕೊಂಡು ಬಂದಿರುವ ಆರ್'ಎಸ್ಎಸ್ ಇದೀಗ ಸಮವಸ್ತ್ರವಾದ ಖಾಕಿ ಚಡ್ಡಿಯ ಬದಲು ಪ್ಯಾಂಟ್ ಗೆ ಬದಲಿಸಲು ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಇದೇ ಮೊದಲ ಬಾರಿಗೆ ತನ್ನ ಸಮವಸ್ತ್ರ ಬದಲಾವಣೆ ಕುರಿತು ಚಿಂತನೆ ನಡೆಸುತ್ತಿರುವ ಆರ್ಎಸ್ಎಸ್ ಲಭ್ಯವಿರುವ ಹೊಸ ಸಮವಸ್ತ್ರಗಳಲ್ಲಿಯೇ ಬದಲಾವಣೆಯನ್ನು ಪರಿಣಾಮಕಾರಿಯಾಗಿ ಹೇಗೆ ಮಾಡಬಹುದು ಎಂಬುದರ ಕುರಿತಂತೆ ಚಿಂತನೆ ನಡೆಸಲು ಸಮಿತಿಯೊಂದನ್ನು ನೇಮಿಸಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತಂತೆ ಮಾತನಾಡಿರುವ ಆರ್ಎಸ್ಎಸ್ ನಾಯಕ ಸತೀಶ್ ಮೋಧ್ ಅವರು, ಮೂರು ದಿನಗಳ ಕಾಲ ರಾಂಚಿಯಲ್ಲಿ ಸುಧೀರ್ಘವಾಗಿ ನಡೆದ ಸಭೆಯಲ್ಲಿ ಸಮವಸ್ತ್ರ ಬದಲಾವಣೆ ಕುರಿತಂತೆ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಹೇಳಿದ್ದಾರೆ.

ಸಮವಸ್ತ್ರ ವಿಚಾರ ಕುರಿತಂತೆ ಮುಂದಿನ ದಿನಗಳಲ್ಲಿ ರಾಜಸ್ತಾನದಲ್ಲಿ ನಡೆಯುವ ಪ್ರತಿನಿಧಿ ಸಭೆಯಲ್ಲಿ ಅಂತಿಮ ತೀರ್ಮಾನವನ್ನು ಕೈಗೊಳ್ಳಲಾಗುತ್ತದೆ. ರಾಂಚಿಯಲ್ಲಿ ನಡೆದ ಸಭೆಯಲ್ಲಿ ಕೆಲವು ನಾಯಕರು ಖಾಕಿ ಚಡ್ಡಿಯಿಂದಾಗಿ ಯುವಕರು ಸಂಘಟನೆ ಸೇರಲು ಹಿಂದೇಟು ಹಾಕುತ್ತಿದ್ದಾರೆಂದು ಹೇಳಿದ್ದರು ಎಂದು ಹೇಳಿದ್ದಾರೆ. ಖಾಕಿ ಚಡ್ಡಿ ಎಂಬುದು ಸಂಘದ ಅತ್ಯಂತ ಪ್ರತಿಷ್ಠಿತ ಹಾಗೂ ವಿಶ್ವಾಸಾರ್ಹ ಬ್ರ್ಯಾಂಡ್ ಆಗಿದೆ. ಹೀಗಾಗಿಯೇ ಸಂಘವು ಹಲವು ವರ್ಷಗಳಿಂದಲೂ ಖಾಕಿ ಚಡ್ಡಿಯನ್ನು ಮುಂದುವರೆಸಿಕೊಂಡು ಬಂದಿದೆಯೇ ಹೊರತು ಬೇರಾವುದೇ ಉದ್ದೇಶದಿಂದಲ್ಲ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com