ಕಾಂಡೋಮ್ ಕೊರತೆಯಿಂದಾಗಿ ಏಡ್ಸ್ ವಿರೋಧಿ ಹೋರಾಟಕ್ಕೆ ಅಡಚಣೆ

ಕಾಂಡೋಮ್ ಕೊರತೆ ಏಡ್ಸ್ ವಿರೋಧಿ ಹೋರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ...
ಏಡ್ಸ್ ಲೋಗೋ
ಏಡ್ಸ್ ಲೋಗೋ

ನವದೆಹಲಿ: ಕಾಂಡೋಮ್ ಕೊರತೆ ಏಡ್ಸ್ ವಿರೋಧಿ ಹೋರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಸರ್ಕಾರ ನೀಡುವ ಉಚಿತ ಕಾಂಡೋಮ್ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹೀಗಾಗಿ ಲೈಂಗಿಕ ಕಾರ್ಯಕರ್ತೆಯರಿಗೆ ಕಾಂಡೋಮ್ ಗಳು ಸಿಗುತ್ತಿಲ್ಲ. ಹೀಗಾಗಿ  ಲೈಂಗಿಕ ಕಾರ್ಯಕರ್ತೆಯರ ಜೊತೆಗಿನ ಅರಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಅಪಾಯ ಹೆಚ್ಚಿದೆ.

1995 ಮತ್ತು 2015 ರ ನಡುವೆ ಸುಮಾರು 3 ಮಿಲಿಯನ್ ಜನರಿಗೆ ಎಚ್ಐವಿ ಸೋಂಕು ತಡೆಗಟ್ಟಿದೆ. ಆದರೆ ಕಳೆದ ವಾರ ಭಾರತ ಸರ್ಕಾರ ಬಿಡುಗಡೆ ಮಾಡಿದ ಅಂಕಿ ಅಂಶದ ಪ್ರಕಾರ ಸುಮಾರು 31 ರಾಜ್ಯಗಳಲ್ಲಿ ಸರ್ಕಾರ ನೀಡುವ ಉಚಿತ ಕಾಂಡೋಮ್ ಗಳ ಪೂರೈಕೆಯಲ್ಲಿ ಗಣನೀಯವಾಗಿ ಇಳಿಕೆಯಾಗಿದೆ ಎಂದು ಹೇಳಿದೆ.

ಇನ್ನು ಸರ್ಕಾರ ಕಾಂಡೋಮ್ ಖರೀದಿಗೆ ಹಣ ಬಿಡುಗಡೆ ಮಾಡದ ಕಾರಣ ಕಾಂಡೋಮ್ ಸಮರ್ಪಕ ಪೂರೈಕೆಯಾಗುತ್ತಿಲ್ಲ, ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದಾಗಿ ಬಡ ಜನರಲ್ಲಿ ಸೋಂಕು ಹೆಚ್ಚುತ್ತಿದೆ. ಇದು ಏಡ್ಸ್ ಹೋರಾಟದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಹೇಳಲಾಗಿದೆ.

2013 ರ ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸುಮಾರು 1 ಲಕ್ಷ 30 ಸಾವಿರ ಮಂದಿ  ಎಚ್ ಐವಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com