ನವದೆಹಲಿ: ಹೈಕೋರ್ಟ್, ಸುಪ್ರೀಂಕೋರ್ಟ್ ಗಳಲ್ಲಿ ನ್ಯಾಯಮೂರ್ತಿಗಳು, ಮುಖ್ಯ ನ್ಯಾಯಮೂರ್ತಿಗಳ ಭರ್ತಿ ಮಾಡಲು ಕೊಲಿಜಿಯಂಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. .ಕೊಲಿಜಿಯಂ ವ್ಯವಸ್ಥೆಯ ಸುಧಾರಣೆಗಾಗಿ ಸಾರ್ವ ಜನಿಕಗೆ ಅಭಿಪ್ರಾಯ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನು ನ.13ರವರೆಗೆ ವಿಸ್ತರಿಸಿದ ಬೆನ್ನಲ್ಲೇ ಸುಪ್ರೀಂ ಈ ಸ್ಪಷ್ಟನೆ ನೀಡಿದೆ. .ಕೊಲಿಜಿಯಂ ಸುಧಾರಣೆ ಆಗ್ರಹ ಕೇಳಿ ಬಂದ ಹಿನ್ನೆಲೆಯಲ್ಲಿ ನ್ಯಾಯಾಲಯ ಸಾರ್ವಜನಿಕರಿಂದ ಸಲಹೆ ಸ್ವೀಕರಿಸುವ ಅವಧಿಯನ್ನು 9 ದಿನಗಳಿಗೆ ವಿಸ್ತರಿಸಿತ್ತು. .ಆದರೆ, ಇದರಿಂದ ಖಾಲಿ ಬಿದ್ದಿರುವ ನ್ಯಾಯಾಧೀಶರ ನೇಮಕಕ್ಕೆ ತೊಂದರೆ ಆಗಬಾರದು ಎಂದು ಕೊಲಿಜಿಯಂ ನಿರ್ಧಾರದಲ್ಲಿ ಮಧ್ಯಪ್ರವೇಶಿಸಲ್ಲ ಎಂಬ ಸಂದೇಶವನ್ನೂ ರವಾನಿಸಿದೆ..Follow KannadaPrabha channel on WhatsApp Subscribe to KannadaPrabha YouTube Channel and watch Videos Download the KannadaPrabha News app to follow the latest news updates Subscribe and Receive exclusive content and updates on your favorite topics