ಈಕೆ ಭಾರತದ ಮೊದಲ ತೃತೀಯ ಲಿಂಗಿ ಸಬ್ ಇನ್ಸ್ ಪೆಕ್ಟರ್

ಚೆನ್ನೈನ ಕೆ.ಪ್ರತಿಕಾ ಯಶಿನಿ ಮದ್ರಾಸ್ ಹೈಕೋರ್ಟ್ ನ ಕಾನೂನು ಹೋರಾಟದಲ್ಲಿ ಗೆದ್ದು ದೇಶದ ಮೊದಲ ತೃತೀಯ ಲಿಂಗಿ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ....
ತೃತೀಯ ಲಿಂಗಿ  ಕೆ.ಪ್ರತಿಕಾ ಯಶಿನಿ
ತೃತೀಯ ಲಿಂಗಿ ಕೆ.ಪ್ರತಿಕಾ ಯಶಿನಿ

ಚೆನ್ನೈ: ಚೆನ್ನೈನ ಕೆ.ಪ್ರತಿಕಾ ಯಶಿನಿ ಮದ್ರಾಸ್ ಹೈಕೋರ್ಟ್ ನ ಕಾನೂನು ಹೋರಾಟದಲ್ಲಿ ಗೆದ್ದು ದೇಶದ ಮೊದಲ ತೃತೀಯ ಲಿಂಗಿ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

ಪ್ರತಿಕಾ ಯಶಿನಿ ಅವರಿಗೆ ಸಬ್ ಇನ್ಸ್ ಪೆಕ್ಟರ್ ಆಗುವ ಎಲ್ಲಾ ಅರ್ಹತೆ ಇದ್ದು ಅವರಿಗೆ ಎಸ್ ಐ ಹುದ್ದೆ ನೀಡಬೇಕೆಂದು ತಮಿಳುನಾಡು  ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.  

ಇನ್ನು ಮುಂದೆ ನಡೆಯುವ ನೇಮಕಾತಿ ಪ್ರಕ್ರಿಯೆಗಳಲ್ಲಿ ತೃತೀಯ ಲಿಂಗಿಗಳಿಗಾಗಿ 3ನೇ ಕ್ಯಾಟಗರಿ ಸೇರಿಸಬೇಕೆಂದು ತಮಿಳುನಾಡು ಯೂನಿಫಾರ್ಮ್ಡ್ ಸರ್ವೀಸ್ ನೇಮಕಾತಿ ಮಂಡಳಿಗೆ ಮುಖ್ಯ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಪುಷ್ಪಾ ಸತ್ಯನಾರಾಯಣ ಅವರನ್ನೊಳಗೊಂಡ ನ್ಯಾಯ ಪೀಠ ಆದೇಶಿಸಿದೆ.

ಸಬ್ ಇನ್ಸ್ ಪೆಕ್ಟರ್ ಹುದ್ದೆಯ ಅರ್ಜಿ ತಿರಸ್ಕಾರಗೊಂಡ ಹಿನ್ನೆಲೆಯಲ್ಲಿ ಪ್ರತಿಕಾ ಯಶಿನಿ ಕೋರ್ಟ್ ಮೆಟ್ಟಿಲೇರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com