ಟ್ರೈನ್ ಟಿಕೆಟ್ ಕ್ಯಾನ್ಸಲ್ ಮಾಡುವುದು ದುಬಾರಿ

ಇನ್ನು ಮುಂದೆ ರೈಲಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ರದ್ದು ಮಾಡಿದರೆ ದಂಡದ ಮೊತ್ತ ದುಪ್ಪಟ್ಟಾಗಲಿದೆ. ನ.೧೨ರಿಂದ ಹೊಸ ನಿಯಮ ಜಾರಿಯಾಲಿದೆ. ಇದರ ಜತೆಗೆ ರೈಲು ತೆರಳಿದ ಬಳಿಕ ಯಾವುದೇ ರೀತಿಯಲ್ಲಿ..
ರೈಲು ಪ್ರಯಾಣ (ಸಂಗ್ರಹ ಚಿತ್ರ)
ರೈಲು ಪ್ರಯಾಣ (ಸಂಗ್ರಹ ಚಿತ್ರ)
Updated on

ನವದೆಹಲಿ: ಇನ್ನು ಮುಂದೆ ರೈಲಲ್ಲಿ ಟಿಕೆಟ್ ಕಾಯ್ದಿರಿಸಿಕೊಂಡು ರದ್ದು ಮಾಡಿದರೆ ದಂಡದ ಮೊತ್ತ ದುಪ್ಪಟ್ಟಾಗಲಿದೆ. ನ.೧೨ರಿಂದ ಹೊಸ ನಿಯಮ ಜಾರಿಯಾಲಿದೆ. ಇದರ ಜತೆಗೆ ರೈಲು ತೆರಳಿದ ಬಳಿಕ ಯಾವುದೇ ರೀತಿಯಲ್ಲಿ ಟಿಕೆಟ್ ಹಣ ಪ್ರಯಾಣಿಕರಿಗೆ ನೀಡಲಾಗುವುದಿಲ್ಲ.

ಜತೆಗೆ ನಿಗದಿತ ಪ್ರಯಾಣಕ್ಕೆ ೪ ಗಂಟೆಗಳ ಮುನ್ನ ಟಿಕೆಟ್ ರದ್ದು ಮಾಡಿದರೆ ಹಣ ಸಿಗುತ್ತದೆ ಎಂದು ಪರಿಷ್ಕೃತ ನಿಯಮಗಳಲ್ಲಿ ಉಲ್ಲೇಖಿಸಲಾಗಿದೆ. ರಿಸರ್ವೇಷನ್ ಎಗೆನೆಸ್ಟ್ ಕ್ಯಾನ್ಸಲೇಷನ್  (ಆರ್‌ಎಸಿ) ಮತ್ತು ವೈಟಿಂಗ್ ಲಿಸ್ಟ್ ಟಿಕೆಟ್ ಪ್ರಯಾಣದ ಅರ್ಧ ಗಂಟೆ ಮುನ್ನವೂ ರದ್ದು ಅವಕಾಶ ನೀಡಲಾಗಿದೆ. ಖಚಿತವಾಗಿರುವ ದ್ವಿತೀಯ ದರ್ಜೆ ಟಿಕೆಟ್ ಅನ್ನು ೪೮ ಗಂಟೆಗಳಲ್ಲಿ ರದ್ದು  ಮಾಡಿದರೆ ಶುಲ್ಕವನ್ನು ಹಾಲಿ ರು.೩೦ ರಿಂದ ರು.೬೦ಕ್ಕೆ ಹೆಚ್ಚಿಸಲಾಗಿದೆ.

ತೃತೀಯ ದರ್ಜೆ ಎ.ಸಿ. ಟಿಕೆಟ್ ಅನ್ನು ಕ್ಯಾನ್ಸಲ್ ಮಾಡಿಸಿದರೆ ರು.೧೮೦ ದಂಡ. ಹಾಲಿ ಮೊತ್ತ ರು.೯೦. ಸೆಕೆಂಡ್ ಸ್ಲೀಪರ್ ಕ್ಲಾಸ್ ಟಿಕೆಟ್ ರದ್ದು ಮಾಡಿದರೆ ರು.೬೦ ರಿಂದ ರು.೧೨೦, ಸೆಕೆಂಡ್  ಎಸಿ ಕ್ಲಾಸ್ ಟಿಕೆಟ್ ರದ್ದಾದರೆ ರು.೧೦೦ರಿಂದ ರು.೨೦೦ ಶುಲ್ಕ ಹೆಚ್ಚಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com