ಕೇರಳ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿ ಸಾಧನೆ

ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮೊದಲಿನ ಸೆಮಿಫೈನಲ್ ಎಂದೇ ಪರಿಗಣಿಸಲ್ಪಟ್ಟಿರುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ತಿರುವನಂತಪುರಂ: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮೊದಲಿನ ಸೆಮಿಫೈನಲ್ ಎಂದೇ ಪರಿಗಣಿಸಲ್ಪಟ್ಟಿರುವ ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಚ್ಚರಿಯ ಫಲಿತಾಂಶ ನೀಡಿದೆ. ಬಿಜೆಪಿ ಪಾಲಕ್ಕಾಡ್ ನಗರಸಭೆ ಹಾಗೂ ಕಾಸರಗೋಡಿನ ಮೂರು ಸೇರಿ, 14 ಗ್ರಾಮ ಪಂಚಾಯತ್ ಗಳಲ್ಲಿ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಗಿದೆ. 
ರಾಜ್ಯ ರಾಜಧಾನಿ ತಿರುವನಂತಪುರ ಕಾರ್ಪೋರೇಷನ್ ನಲ್ಲಿ ಬಿಜೆಪಿ 34 ಸ್ಥಾನ ಗಳಿಸುವ ಮೂಲಕ ಎರಡನೇ ಎರಡನೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎರ್ನಾಕುಲಂ ಮತ್ತು ಪಾಲಕ್ಕಾಡ್ ಕಾರ್ಪೋರೇಷನ್‍ಗಳಲ್ಲೂ ಬಿಜೆಪಿ ಉತ್ತಮ ಸಾಧನೆ ಮಾಡಿದೆ. ಇದು ಬಿಜೆಪಿ ಪಾಲಿಗೆ ಹೊಸ ದಾಖಲೆ. ಈ ರೀತಿಯ ಫಲಿತಾಂಶ ಸ್ವತಃ ಬಿಜೆಪಿಗೂ ಅಚ್ಚರಿ ಮೂಡಿಸಿದೆ. ಈ ಮೂಲಕ ಅದು ಆಡಳಿತಾರೂಢ ಯುಡಿಎಫ್ ಮತ್ತು ಪ್ರತಿಪಕ್ಷವಾದ ಎಲ್ ಡಿಎಫ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. 
ಈ ಚುನಾಣೆಯಲ್ಲಿ ಹಿಂದುಳಿದ ವರ್ಗದ ಶ್ರೀನಾರಾಯಣ ಧರ್ಮ ಪರಿಪಾಲನ ಯೋಗಂನ ಸಹಕಾರ ಪಡೆದುಕೊಂಡದ್ದು ಬಿಜೆಪಿಗೆ ಲಾಭದಾಯಕವಾಗಿ ಪರಿಣಮಿಸಿತು. ಬಿಜೆಪಿ ಈ ಗೆಲುವಿನಿಂದಾಗಿ ಯುಡಿಎಫ್ ಮತ್ತು ಎಲ್ ಡಿಎಫ್ ಗೆ ನಡುಕ ಶುರುವಾಗಿದೆ. ಯುಡಿಎಫ್ಗಾದ ತೀವ್ರ ಹಿನ್ನಡೆಗೆ ಸಂಬಂಧಿಸಿ ಮುಖ್ಯಮಂತ್ರಿ ಉಮನ್ ಚಾಂಡಿ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದ್ದಾರೆ. 
ಬಿಜೆಪಿ ಪಾಲಿಗಿದು ಇದು ಪ್ರಮುಖ ಗೆಲುವು ಎಂದು ಭಾವಿಸಬೇಡಿ. ಇದು ತಾತ್ಕಾಲಿಕ ಎಂದು ಅವರು ಹೇಳಿದ್ದಾರೆ. ಜತೆಗೆ, ನಾವು ಎಡವಿದ್ದೆಲ್ಲಿ ಎನ್ನುವುದನ್ನು ಅರಿತುಕೊಳ್ಳಲು ಇದು ಸಕಾಲ ಎಂದಿದ್ದಾರೆ ಚಾಂಡಿ. ಈ ನಡುವೆ ಕೇಂದ್ರದ ಮಾಜಿ ಸಚಿವ ಎ.ಕೆ. ಆ್ಯಂಟನಿ ಕೂಡ ಕಾಂಗ್ರೆಸ್ ನೇತೃತ್ವದ ಯುಡಿಫ್ ಮೈತ್ರಿಕೂಟದ ಸೋಲಿಗೆ ಆಘಾತ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಗೆಲುವು ಯುಡಿಎಫ್ ಹಾಗೂ ಎಲ್‍ಡಿಎಫ್ ಪಾಲಿಗೆ ಎಚ್ಚರಿಕೆಯ ಗಂಟೆ ಎಂದು ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com