ಪಟಾನಾ: ಬಿಹಾರದಲ್ಲಿ ಯಾರು ಗೆದ್ದರೋ, ಬಿಟ್ಟರೋ ಎಂಬ ವಿಚಾರ ಬಿಟ್ಟುಬಿಡೋಣ. ಕನಿಷ್ಠ 4ರಾಜಕೀಯ ಪಕ್ಷಗಳನ್ನು ಹಿಂದೆ ಹಾಕಿ 'ನೋಟಾ'(ಮೇಲಿನ ಯಾರೂ ಇಲ್ಲ) ಜಯ
ಸಾ„ಸಿರುವುದೇ ಇಲ್ಲಿನ ವಿಶೇಷ. ಬಿಹಾರದ ಶೇ.2.6ರಷ್ಟು ನಾಗರಿಕರು ಮಹಾಮೈತ್ರಿಕೂಟ ಮತ್ತು ಎನ್‍ಡಿಎ ಎರಡನ್ನೂ ಸಂಪೂರ್ಣವಾಗಿ ತಿರಸ್ಕರಿಸಿ, ನೋಟಾಗೆ ನಮ್ಮ ವೋಟು
ಎಂದಿರುವುದಂತೂ ಸತ್ಯ. ಆಯೋಗದ ವೆಬ್‍ಸೈಟೇ ಈ ಮಾಹಿತಿ ನೀಡಿದೆ. ಮತ ಹಂಚಿಕೆಯಲ್ಲಿ 4 ಪಕ್ಷಗಳನ್ನು ಹಿಂದಿಕ್ಕಿ, ನೋಟಾ ಮುಂದೆ ಸಾಗಿದೆ.
ನೋಟಾ ಸೋಲಿಸಿದ 4 ಪಕ್ಷಗಳಿವು:
ಹಿಂದೂಸ್ಥಾನಿ ಅವಾಮಿ ಮೋರ್ಚಾ: ಜೆಡಿಯು ನಿಂದ ಹೊರಬಂದು ತನ್ನದೇ ಆದ ಎಚ್‍ಎಎಂ ಪಕ್ಷ ಕಟ್ಟಿಕೊಂಡ ಜಿತನ್ ರಾಂ ಮಾಂಝಿಯ ಪಕ್ಷ ಗಳಿಸಿದ್ದ ಶೇ.2.3ರಷ್ಟು ಮತಗಳನ್ನಷ್ಟೆ.
ಸಮಾಜವಾದಿ ಪಕ್ಷ (ಎಸ್ಪಿ): ಸೀಟು ಹಂಚಿಕೆ ವಿಚಾರವನ್ನಿಟ್ಟುಕೊಂಡು ಮಹಾಮೈತ್ರಿಯಿಂದ ಹೊರಬಂದಿದ್ದ ಎಸ್ಪಿ ಸ್ವತಂತ್ರವಾಗಿ ಸ್ಪರ್ಧಿಸಿತು.
ಯಾದವರ ಮತಗಳನ್ನು ಸೆಳೆಯುವಲ್ಲಿ ಸೋತ ಎಸ್ಪಿಗೆ ಸಿಕ್ಕಿದ್ದು ಕೇವಲ ಶೇ.1.1ರಷ್ಟು ಮತ.
ಎಐಎಂಐಎಂ: ಅಸಾದುದ್ದೀನ್ ಒವೈಸಿ ಅವರ ಎಐಎಂಐಎಂ ಮುಸ್ಲಿಮರ ಮತಗಳತ್ತ ಕಣ್ಣು ಹಾಕಿತು. ಎರಡೂ ಮೈತ್ರಿಗಳನ್ನು ತಿರಸ್ಕರಿಸುವಂತೆ ಕರೆ ನೀಡಿತು. ಆದರೆ, ಇದಕ್ಕೆ ಸೊಪ್ಪು ಹಾಕದ ಮತದಾರರು ಈ ಪಕ್ಷಕ್ಕೆ ಕೊಟ್ಟದ್ದು ಶೇ.0.4ರಷ್ಟೇ ಮತ.
ಎಡಪಕ್ಷಗಳು: ಸಿಪಿಐ ಮತ್ತು ಸಿಪಿಎಂ ಈ ಬಾರಿ ಗಳಿಸಿದ್ದು ಕೇವಲ ಶೇ.2ರಷ್ಟು ಮತಗಳು.