

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಶೇ.21 ಕ್ಕೂ ಹೆಚ್ಚು ವಯಸ್ಕರರು ತಂಬಾಕು ಬಳಕೆ ಮಾಡುತ್ತಾರೆ. ಇದರಲ್ಲಿ 880,000 ಧೂಮಪಾನಿಗಳಿದ್ದು ತಂಬಾಕು ಜಗಿಯುವವರಿಗಿಂತ ಧೂಮಪಾನ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಹಿಮಾಚಲ ಪ್ರದೇಶದ ಆರೋಗ್ಯ ಸಚಿವ ಕೌಲ್ ಸಿಂಗ್ ಹೇಳಿದ್ದಾರೆ.
ಧೂಮಾಪನ ಮುಕ್ತ ರಾಜ್ಯ ನಿರ್ಮಿಸುವುದಕ್ಕೆ ರಾಜ್ಯ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದ್ದು ಇತ್ತೀಚೆಗಷ್ಟೆ ಬಿಡಿ ಸಿಗರೇಟು ಮಾರಾಟವನ್ನು ನಿಷೇಧ ಮಾಡಲಾಗಿತ್ತು ಎಂದು ಕೌಲ್ ಸಿಂಗ್ ಮಾಹಿತಿ ನೀಡಿದ್ದಾರೆ. ನ್ಯೂಯಾರ್ಕ್ ನಲ್ಲಿ ನಡೆದ ಬ್ಲೂಮ್ಬರ್ಗ್ ತಂಬಾಕು ನಿಯಂತ್ರಣದ ಬಗ್ಗೆ ಆಯೋಜಿಸಲಾಗಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಕೌಲ್ ಸಿಂಗ್, ರಾಜ್ಯದಲ್ಲಿ 6 .8 ಮಿಲಿಯನ್ ಜನಸಂಖ್ಯೆ ಇದ್ದು, ಆರ್ಟಿಕಲ್ 5 .3 ರ ಅನುಗುಣವಾಗಿ ಸಮಗ್ರ ಶಾಸನ ರೂಪಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಜುಲೈ-2013 ರಲ್ಲಿ ರಾಜ್ಯವನ್ನು ಧೂಮಾಪನ ಮುಕ್ತ ಎಂದು ಘೋಷಿಸಲಾಗಿತ್ತು, ಧೂಮಪಾನ ನಿಯಂತ್ರಿಸಲು, ರಾಷ್ಟ್ರೀಯ ತಂಬಾಕು ನಿಯಂತ್ರಣ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಎಂದು ಕೌಲ್ ಸಿಂಗ್ ತಿಳಿಸಿದ್ದಾರೆ.