ಮುಖ್ಯಮಂತ್ರಿ ಅಭ್ಯರ್ಥಿ ಮಾಡಬೇಕಿತ್ತು ಎಂದು ನಾನು ಹೇಳಿಲ್ಲ: ಶತ್ರುಘ್ನ ಸಿನ್ಹಾ

ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸೂಚಿಸುತ್ತಿದ್ದರೆ ಬಿಹಾರ ವಿಧಾನಸಭೆಯ ಫಲಿತಾಂಶ ವಿಭಿನ್ನವಾಗಿ ಬರುತ್ತಿತ್ತು ಎಂದು ತಾವು ಎಲ್ಲಿಯೂ...
ಶತ್ರುಘ್ನ ಸಿನ್ಹಾ ಮತ್ತು ಕೈಲಾಶ್ ವಿಜಯ್ ವಾರ್ಗಿಯಾ(ಸಂಗ್ರಹ ಚಿತ್ರ)
ಶತ್ರುಘ್ನ ಸಿನ್ಹಾ ಮತ್ತು ಕೈಲಾಶ್ ವಿಜಯ್ ವಾರ್ಗಿಯಾ(ಸಂಗ್ರಹ ಚಿತ್ರ)

ನವದೆಹಲಿ: ತಮ್ಮನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಸೂಚಿಸುತ್ತಿದ್ದರೆ ಬಿಹಾರ ವಿಧಾನಸಭೆಯ ಫಲಿತಾಂಶ ವಿಭಿನ್ನವಾಗಿ ಬರುತ್ತಿತ್ತು ಎಂದು ತಾವು ಎಲ್ಲಿಯೂ ಹೇಳಿಲ್ಲ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಸ್ಪಷ್ಟಪಡಿಸಿದ್ದಾರೆ.

ತಮ್ಮನ್ನು ಬಿಹಾರ ವಿಧಾನಸಭೆಯ ಚುನಾವಣಾ ಪ್ರಚಾರಕ್ಕೆ ಕರೆಯುತ್ತಿದ್ದರೆ ಪರಿಸ್ಥಿತಿ ವಿಭಿನ್ನವಾಗಿರುತ್ತಿತ್ತು ಎಂದಷ್ಟೇ ಹೇಳಿದ್ದೆ ಎಂದು ಸಿನ್ಹಾ ತಿಳಿಸಿದ್ದಾರೆ.

ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಿಸುತ್ತಿದ್ದರೆ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ನಾನು ಹೇಳಿದ್ದೇನೆ ಎಂದು ಮಾಧ್ಯಮಗಳು ಆ ಭಾವನೆ ಸೃಷ್ಟಿಸಲು ಪ್ರಯತ್ನಿಸಿದವು. ಆದರೆ ನಾನು ಎಲ್ಲಿಯೂ ಅದನ್ನು ಹೇಳಿಲ್ಲ. ನನ್ನನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ನೇಮಿಸಬೇಕಿತ್ತು ಎಂಬ ನಿರೀಕ್ಷೆಯೂ ನನ್ನಲ್ಲಿಲ್ಲ ಎಂದು ಬಿಜೆಪಿ ಸಂಸದ ಶತ್ರುಘ್ನ ಸಿನ್ಹಾ ಟ್ವೀಟ್ ಮಾಡಿದ್ದಾರೆ.

ಆದರೆ ಬಿಹಾರ ಚುನಾವಣೆಯ ಸೋಲಿಗೆ ನಿಖರ ಕಾರಣಗಳನ್ನು ಗೊತ್ತುಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಬಿಹಾರ ಫಲಿತಾಂಶ ಹೊರಬಿದ್ದಿದೆ. ಇಂತಹ ಅವಮಾನಕರ ಸೋಲು ನಮಗೆ ದುಖ ತಂದಿದೆ. ಸೋಲನ್ನು ನಾವು ಒಪ್ಪಿಕೊಂಡು ಅದಕ್ಕೆ ಕಾರಣ ಹುಡುಕಬೇಕು. ಸೋಲಿನ ಜವಾಬ್ದಾರಿಯಿಂದ ನುಣುಚಿಕೊಳ್ಳುವುದು ಸರಿಯಲ್ಲ ಎಂದರು.

ನಾಯಿಗೆ ಹೋಲನೆ:
ಶತ್ರುಘ್ನ ಸಿನ್ಹಾ ಅವರ ಈ ಹೇಳಿಕೆಯನ್ನು ಬಿಜೆಪಿ ಹಿರಿಯ ನಾಯಕ, ಬಿಹಾರ ವಿಧಾನಸಭಾ ಚುನಾವಣೆಯ ಬಿಜೆಪಿ ಯೋಜಕ ಕೈಲಾಶ್ ವಿಜಯ್ ವಾರ್ಗಿಯಾ ತೀವ್ರವಾಗಿ ಖಂಡಿಸಿದ್ದು, ಸಿನ್ಹಾ ಅವರನ್ನು ನಾಯಿಗೆ ಹೋಲಿಸಿದ್ದಾರೆ.

ಕಾರು ಚಲಿಸುವಾಗ, ನಾಯಿ ಕೂಡ ಅದರ ಕೆಳಗೆ ಚಲಿಸುತ್ತದೆ.ತನ್ನಿಂದಾಗಿ ಕಾರು ಚಲಿಸುತ್ತದೆ ಎಂದು ನಾಯಿ ತಿಳಿದುಕೊಳ್ಳುತ್ತದೆ. ಬಿಜೆಪಿ ಪಕ್ಷ ಒಬ್ಬ ವ್ಯಕ್ತಿಯನ್ನು ಅವಲಂಬಿಸಿಲ್ಲ. ಇದೊಂದು ಸಂಪೂರ್ಣ ಸಂಸ್ಥೆ. ಇಲ್ಲಿ ಕ್ರಮಬದ್ಧವಾಗಿ ಜವಾಬ್ದಾರಿಗಳನ್ನು ನೀಡಲಾಗುತ್ತದೆ.ಇಷ್ಟು ದಿನ ಮೌನವ್ರತ ನಡೆಸುತ್ತಿದ್ದವರು ಈಗ ಮಾತನಾಡಲು ಆರಂಭಿಸಿದ್ದಾರೆ ಎಂದು ವಿಜಯ್ ವಾರ್ಗಿಯಾ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com