ಬರೋಬ್ಬರಿ 1400 ಕೆಜಿ ತೂಕ ಹೊಂದಿರುವ ಈ ಕೋಣದ ಬೆಲೆ 7ಕೋಟಿ

ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಲ್ಲಿ ಪಶುಮೇಳ ನಡೆಯುತ್ತಿದ್ದು, ಈ ಬಾರಿಯ ಮೇಳದಲ್ಲಿ ಹರಿಯಾಣದಿಂದ...
ಈ ಕೋಣದ ಬೆಲೆ ಬರೋಬ್ಬರಿ ಏಳು ಕೋಟಿ
ಈ ಕೋಣದ ಬೆಲೆ ಬರೋಬ್ಬರಿ ಏಳು ಕೋಟಿ
Updated on
ಹೈದ್ರಾಬಾದ್: ತೆಲಂಗಾಣ ರಾಜಧಾನಿ ಹೈದ್ರಾಬಾದ್ ನಲ್ಲಿ ಪಶುಮೇಳ ನಡೆಯುತ್ತಿದ್ದು, ಈ ಬಾರಿಯ ಮೇಳದಲ್ಲಿ ಹರಿಯಾಣದಿಂದ ಬಂದಿರುವ 1400 ಕೆಜಿ ತೂಕದ ಕೋಣವೊಂದು ಹೆಚ್ಚು ಆಕರ್ಷಿಣೀಯವಾಗಿದೆ. 
‘ಸದರ್ ಉತ್ಸವ್'ದಲ್ಲಿ ಪಶುಮೇಳದಲ್ಲಿ ಹೆಚ್ಚು ಆಕರ್ಷಣೆಗೆ ಒಳಗಾಗಿರುವ ಕೋಣದ ಹೆಸರು ಯುವರಾಜ. ಇದರ ತೂಕ 1400ಕೆಜಿಯಾಗಿದ್ದು, ಬರೋಬ್ಬರಿ 7 ಕೋಟಿ ಬೆಲೆ ಬಾಳುತ್ತದೆ. 
ಮುರ್ರಾ ತಳಿಯ ಈ ಕೋಣ, 14 ಅಡಿ ಉದ್ದ 6 ಅಡಿ ಎತ್ತರವಿದೆ. 
ಹರ್ಯಾಣದ ಕರಮವೀರ ಈ ಕೋಣದ ಮಾಲೀಕ. ವಿದೇಶದಲ್ಲೂ ಅನೇಕ ಪ್ರದರ್ಶಗಳನ್ನು ನೀಡಿರುವ ಯುವರಾಜ 12 ಬಾರಿ ಚಾಂಪಿಯನ್ ಪಟ್ಟ ಧರಿಸಿದೆಯಂತೆ. ಹವಾ ನಿಯಂತ್ರಿತ ಕೋಣೆಯಲ್ಲಿ ಆತನನ್ನು ಸಾಕಲಾಗುತ್ತದೆಯಂತೆ. ದಿನವೊಂದಕ್ಕೆ 20 ಲೀಟರ್ ಹಾಲು, 5 ಕಿಲೋ ಸೇಬು ಮತ್ತು 15 ಕೆ.ಜಿ ಆಹಾರವನ್ನು ತಿನ್ನುವ ಇದು ಒಂದು ಬಾಟಲ್ ಕಂಟ್ರಿ ಲಿಕ್ಕರನ್ನು ಸಹ ಕುಡಿಯುತ್ತದೆಯಂತೆ.
ದಿನಕ್ಕೆ ಕೋಣ ಸಾಕಲು ಸಾವಿರಾರು ರುಪಾಯಿ ವ್ಯಯಿಸುತ್ತಾರಂತೆ. ಆದರೆ, ಇದರಿಂದ ವರ್ಷಕ್ಕೆ ಬರೋಬ್ಬರಿ 1ಕೋಟಿ ಆದಾಯವಿದೆಯಂತೆ. ಇದರ ವಿಶೇಷತೆ ಏನೆಂದೆರ ಕೃತಕ ಗರ್ಭಧಾರಣೆಗೆ ಈತನ ವೀರ್ಯವನ್ನು ಬಳಸಲಾಗುತ್ತದೆಯಂತೆ.
ಪ್ರತಿವರ್ಷ  ದೀಪಾವಳಿಯ ಎರಡನೇ ದಿನ ಹೈದ್ರಾಬಾದ್ ನಲ್ಲಿ ಎಮ್ಮೆಗಳ ಪ್ರದರ್ಶನ ಮತ್ತು ಮಾರಾಟ ಜಾತ್ರೆ ನಡೆಯುತ್ತದೆ. ಈ ಮೇಳದಲ್ಲಿ ಯುವರಾಜ ಪಾಲ್ಗೊಳ್ಳಲು ಹರಿಯಾಣದಿಂದ ಆಗಮಿಸಿದ್ದಾನೆ. ಆದರೆ, ಈ ಕೋಣದ ಮಾಲೀಕ ಯುವರಾಜ ನನ್ನ ಮಗನಂತೆ, ಪ್ರೀತಿ ಮಮತೆಯಿಂದ ಅದನ್ನು ಸಾಕಿದ್ದು, ಮಾರಾಟ ಮಾಡಲಾರೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com