

ತ್ರಿಪುರ: ಕೇಂದ್ರದಲ್ಲಿ ಬದ್ಧ ವೈರಿಗಳಾಗಿರುವ ಕಾಂಗ್ರೆಸ್ ಬಿಜೆಪಿ ಮುಂಬರುವ ನಗರ ಪಾಲಿಕೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಲು ಮುಂದಾಗುವ ಮೂಲಕ ರಾಜಕೀಯ ತಜ್ಞರಿಗೆ ಶಾಕ್ ನೀಡಿವೆ.
ಆಡಳಿತರೂಢ ಎಡರಂಗ ಪಕ್ಷವನ್ನು ಸೋಲಿಸಲು ನಮ್ಮೊಂದಿಗೆ ಕೈಜೋಡಿಸುವಂತೆ ಬಿಜೆಪಿ ಕಾಂಗ್ರೆಸ್ನ್ನು ಕೇಳಿಕೊಂಡಿದೆ.
ಐಎಎನ್ಎಸ್ ವರದಿಗಳ ಪ್ರಕಾರ, ನಗರ ಪಾಲಿಕೆಯಲ್ಲಿ ಪ್ರತಿಪಕ್ಷಗಳಾಗಿರುವ ಕಾಂಗ್ರೆಸ್ ಬಿಜೆಪಿ ಎರಡೂ ಒಂದಾದರೇ ಆಡಳಿತರೂಢ ಪಕ್ಷವನ್ನು ಸೋಲಿಸುವುದು ಸುಲಭ ಎಂಬುದು ರಾಜ್ಯ ಬಿಜೆಪಿಯ ಲೆಕ್ಕಾಚಾರ.
ಕಾಂಗ್ರೆಸ್ ನಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳಲಿ, ಇಲ್ಲದಿದ್ದರೆ ನಮ್ಮ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿ ಎಂದು ತ್ರಿಪುರ ಬಿಜೆಪಿ ಘಟಕದ ಅಧ್ಯಕ್ಷ ಸುಧೀಂದ್ರ ದಾಸಗುಪ್ತಾ ಅವರು ಹೇಳಿದ್ದಾರೆ.
ಇದೇ ವೇಳೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಬಿಜೆಪಿಯ ಜನಪ್ರಿಯತೆ ಹೆಚ್ಚಿದೆ ಎಂದು ದಾಸಗುಪ್ತಾ ಅವರು ಹೇಳಿದ್ದಾರೆ.