ಪುಡಿ ಕಳ್ಳನೊಬ್ಬ ಉಗ್ರನಾದ, ಕೈ ಬೆರಳಿನಿಂದ ಪತ್ತೆಯಾದ!

ಜೇಬುಗಳಿಗೆ ಕತ್ತರಿ ಹಾಕುತ್ತಾ, ಸಣ್ಣ ಪುಟ್ಟ ಕಳ್ಳತನ ಮಾಡಿ ಪೊಲೀಸರಿಗೆ ಪರಿಚಿತನಾಗಿದ್ದ ಕಳ್ಳನೊಬ್ಬ...
ಪ್ಯಾರಿಸ್ ನಲ್ಲಿ ಭಯೋತ್ಪಾದಕರ ದಾಳಿ
ಪ್ಯಾರಿಸ್ ನಲ್ಲಿ ಭಯೋತ್ಪಾದಕರ ದಾಳಿ
ಪ್ಯಾರಿಸ್: ಜೇಬುಗಳಿಗೆ ಕತ್ತರಿ ಹಾಕುತ್ತಾ, ಸಣ್ಣ ಪುಟ್ಟ ಕಳ್ಳತನ ಮಾಡಿ ಪೊಲೀಸರಿಗೆ ಪರಿಚಿತನಾಗಿದ್ದ ಕಳ್ಳನೊಬ್ಬ, ಪ್ಯಾರಿಸ್‍ನ ಬಟಾ ಕ್ಲಾನ್ ಕನ್ಸರ್ಟ್ ಹಾಲ್‍ನಲ್ಲಿ ಆತ್ಮಾಹುತಿ ಮಾಡಿಕೊಳ್ಳುವ ಮೂಲಕ 89 ಮಂದಿಯನ್ನು ಕ್ಷಣಮಾತ್ರದಲ್ಲಿ ಇಲ್ಲವಾಗಿಸಿದ! ಹೌದು.
ಬಟಾಕ್ಲಾನ್ ನ ಆತ್ಮಾಹುತಿ ಬಾಂಬರ್ ಬೇರಾರೂ ಅಲ್ಲ, ಪ್ಯಾರಿಸ್ ಪೊಲೀಸರಿಗೆ ಗೊತ್ತಿದ್ದ ಕಳ್ಳ. ಹಾಲ್ ನೊಳಗೆ ಸಿಕ್ಕಿದ ಕೈಬೆರಳಿನಿಂದಾಗಿ ಈತನ ಗುರುತು ಪತ್ತೆಯಾಗಿದೆ. 29 ವರ್ಷದ ಒಮರ್ ಇಸ್ಮಾಯಿಲ್ ಮುಸ್ತಫಾ ಹುಟ್ಟಿದ್ದು 1985ರ ನ.21ರಂದು. 
ಪ್ಯಾರಿಸ್ ನ ಉಪನಗರವೊಂದರ ಬಡ ಕುಟುಂಬವೊಂದರಲ್ಲಿ ಹುಟ್ಟಿದ ಈತ ಸಣ್ಣಪುಟ್ಟ ಕಳ್ಳತನ ಮಾಡುತ್ತಿದ್ದ. 2004ರಿಂದ 2010ರ ಅವಧಿಯಲ್ಲಿ ಮುಸ್ತಫಾ ವಿರುದ್ಧ 8 ಪಿಟಿ ಕೇಸುಗಳು ದಾಖಲಾಗಿವೆ. ಒಮ್ಮೆಯೂ eಜೈಲು ಶಿಕ್ಷೆಯಾಗಿಲ್ಲ. ಯಾವುದೇ ಉಗ್ರ ಸಂಘಟನೆಯೊಂದಿಗೆ ಗುರುತಿಸಿಕೊಂಡಿಲ್ಲ. 
ಈತ ಕಳೆದ ವರ್ಷ ಸಿರಿಯಾಗೆ ಹೋಗಿದ್ದನೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.  ಮುಸ್ತಫಾ ಹೆಸರು ಕೇಳಿಬರುತ್ತಿದ್ದಂತೆ ಈತನ ಅಪ್ಪ ಹಾಗೂ ಸಹೋದರ ಪೊಲೀಸ್ ಠಾಣೆಗೆ ಧಾವಿಸಿ ದ್ದಾರೆ. ಮುಸ್ತಫಾ ಪತ್ನಿ, ಮಗಳೊಂದಿಗೆ ಅಲ್ಜೀರಿಯಾಗೆ ಹೋದ ನಂತರ ಆತನ ಸಂಪರ್ಕ ಕಳೆದುಕೊಂಡಿದ್ದೆವು. ಆತ ಉಗ್ರನಾಗುತ್ತಾನೆ ಎಂದು ಭಾವಿಸಿರಲಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com