ರಾಮಕೃಷ್ಣ ಮಿಷನ್ ನ ಸನ್ಯಾಸಿ ಸೇರಿದಂತೆ 6 ಸಾಧಕರಿಗೆ ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿ

ಕೋಲ್ಕತ್ತಾದಲ್ಲಿರುವ ರಾಮಕೃಷ್ಣ ಮಿಷನ್ ನ ಬೇಲೂರು ಮಠದಲ್ಲಿರುವ ಸನ್ಯಾಸಿ ಪ್ರೊ.ಮಹಾನ್ ಮಹಾರಾಜ್ ಅವರನ್ನೂ ಸೇರಿ, 6 ಸಾಧಕರು ಇನ್ಫೋಸಿಸ್ ಸೈನ್ಸ್ ಫೌಂಡೇಷನ್ ನೀಡುವ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗೆ ಭಾಜನರಾಗಿರುವ ಸನ್ಯಾಸಿ ಪ್ರೊ.ಮಹಾನ್ ಮಹಾರಾಜ್
ಇನ್ಫೋಸಿಸ್ ವಿಜ್ಞಾನ ಪ್ರಶಸ್ತಿಗೆ ಭಾಜನರಾಗಿರುವ ಸನ್ಯಾಸಿ ಪ್ರೊ.ಮಹಾನ್ ಮಹಾರಾಜ್

ಬೆಂಗಳೂರು: ಕೋಲ್ಕತ್ತಾದಲ್ಲಿರುವ ರಾಮಕೃಷ್ಣ ಮಿಷನ್ ನ ಬೇಲೂರು ಮಠದಲ್ಲಿರುವ ಸನ್ಯಾಸಿ ಪ್ರೊ.ಮಹಾನ್ ಮಹಾರಾಜ್(ಸ್ವಾಮಿ ವಿದ್ಯಾನಾಥಾನಂದ) ಅವರನ್ನೂ ಸೇರಿ, 6 ಸಾಧಕರು ಇನ್ಫೋಸಿಸ್  ಸೈನ್ಸ್ ಫೌಂಡೇಷನ್ ನೀಡುವ ಇನ್-ಸಿಸ್ ಪ್ರೈಜ್-2015 ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಆರು ಮಂದಿ ಪೈಕಿ ಒಬ್ಬ ಸನ್ಯಾಸಿ, ಒಬ್ಬ ತತ್ವಜ್ಞಾನಿ ಹಾಗೂ ಮತ್ತೋರ್ವ ನಿವೃತ್ತ ಸೇನಾಧಿಕಾರಿ ಪ್ರಶಸ್ತಿ ಸ್ವೀಕರಿಸುತ್ತಿರುವುದು ವಿಶೇಷ. ರಾಮಕೃಷ್ಣ ಮಿಷನ್ ನ ಬೇಲೂರು ಮಠದಲ್ಲಿ ಸನ್ಯಾಸಿಯಾಗಿರುವ ಪ್ರೊ.ಮಹಾನ್ ಮಹಾರಾಜ್ ಅವರು ಜಾಮಿಟ್ರಿಕ್ ಗ್ರೂಪ್ ಥಿಯೆರಿ, ಡೈಮೆನ್ಷನಲ್ ಟೆಪೋಲಜಿ ಮತ್ತು ಕಾಂಪ್ಲೆಕ್ಸ್ ಜಿಯೋಮೆಟ್ರಿ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗಿದೆ. ಮಾನವಶಾಸ ವಿಭಾಗದಲ್ಲಿ ಲಂಡನ್‌ನ ತತ್ವಜ್ಞಾನಿ ಜೋನಾರ್ಡನ್ ಗನೇರಿ, ಜೀವ ವಿಜ್ಞಾನ ವಿಭಾಗದಲ್ಲಿ ಡಾ. ಅಮಿತ್ ಶರ್ಮ, ಭೌತ ವಿಜ್ಞಾನದಲ್ಲಿ  ಜಿ.ರವೀಂದ್ರ ಕುಮಾರ್, ಸಮಾಜ ವಿಜ್ಞಾನದಲ್ಲಿ ಡಾ.ಶ್ರೀನಾಥ್ ರಾಘವನ್ ಅವರ ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತಿದೆ.

ಪುರಸ್ಕೃತರಿಗೆ  ತಲಾ 65 ಲಕ್ಷ ರೂ, 22 ಕ್ಯಾರೆಟ್‌ನ ಚಿನ್ನದ ಪದಕ ಮತ್ತು ಪ್ರಮಾಣ ಪತ್ರವನ್ನು ನೀಡಲಾಗುವುದು. ಆರು ಮಂದಿ ವಿಜ್ಞಾನಿಗಳ ಪೈಕಿ ಒಬ್ಬರು ಸನ್ಯಾಸಿ, ಒಬ್ಬ ತತ್ವಜ್ಞಾನಿ ಮತ್ತು ಮತ್ತೊಬ್ಬರು ನಿವೃತ್ತ ಸೇನಾಧಿಕಾರಿಯಾಗಿರುವುದು ವಿಶೇಷ. ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಹ್ಯುಮಾನಿಟೀಸ್, ಲೈಫ್ ಸೈನ್ಸ್, ಮ್ಯಾಥಮೆಟಿಕಲ್ ಸೈನ್ಸ್, ಫಿಜಿಕಲ್ ಸೈನ್ಸ್, ಸೋಷಿಯಲ್ ಸೈನ್ಸ್ ವಿಭಾಗಗಳಿಗೆ ಸೇರಿದ ವಿಜ್ಞಾನಿಗಳಿಗೆ ಈ ಬಾರಿ ಬಹುಮಾನ ನೀಡಲಾಗಿದೆ. ಪ್ರಶಸ್ತಿ ಗಳಿಸಿದವರ ಪೈಕಿ ಕೆಲವರು ಅಂತಾರಾಷ್ಟ್ರೀಯ ಮಟ್ಟದಲ್ಲೂ ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

ಪ್ರಶಸ್ತಿ ವಿಜೇತರು:

ಪ್ರೊ. ಜೊನಾರ್ಡನ್ ಗನೇರಿ: ಲಂಡನ್‌ನ ಇವರು ಭಾರತೀಯ ತತ್ವಶಾಸದ ವಿಶ್ಲೇಷಣಾತ್ಮಕ ಅಧ್ಯಯನ ನಡೆಸಿದ್ದಾರೆ.
ಪ್ರೊ|ಉಮೇಶ್ ವಾಘಮಾರೆ: ಬೆಂಗಳೂರಿನ ಜವಾಹರಲಾಲ್ ಸೆಂಟರ್-ರ್ ಅಡ್ವಾನ್ಸ್‌ಡ್ ಸೈಂಟಿಫಿಕ್ ರಿಸರ್ಚ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಖ್ಯವಾಗಿ ಟೊಪೊಲಾಜಿಕಲ್ ಇನ್ಸುಲೇಟರ್, ಫೆರೋ ಎಲೆಕ್ಟ್ರಿಕ್ಸ್, ಮಲ್ಟಿ ಫೆರೋಸ್ ಮತ್ತು ಗ್ರಾಫೆನ್ ಕುರಿತ ಸಂಶೋಧನೆ ಮಾಡಿದ್ದಾರೆ.
ಡಾ. ಅಮಿತ್ ಶರ್ಮ: ದೆಹಲಿಯ  ಐಸಿಜಿಇಬಿಯಲ್ಲಿ ಮಲೇರಿಯಾ ಮತ್ತು ಮಲೇರಿಯಾ ಪ್ಯಾರಸೈಟ್ ಕುರಿತು ಮಾಲೆಕ್ಯುಲಾರ್ ಸ್ಟ್ರಕ್ಚರ್ ಬಗ್ಗೆ ಸಂಶೋಧನೆ.
ಪ್ರೊ.ಜಿ.ರವೀಂದ್ರ: ಮುಂಬೈನ್ ಟಾಟಾ ಇನ್ಸ್‌ಟಿಟ್ಯೂಟ್ ಫಂಡಮೆಂಟಲ್ ರೀಸರ್ಚ್‌ನಲ್ಲಿ ಪ್ರಾಧ್ಯಾಪಕರು. ಲೇಸರ್ ಕಣ ಸಂವಾದಿ ಗುಣಗಳ ಬಗ್ಗೆ ಸಂಶೋಧನೆ.
ಡಾ. ಶ್ರೀನಾಥ್ ರಾಘವನ್: ರಕ್ಷಣಾ ಕ್ಷೇತ್ರದಲ್ಲಿ ಸಂಶೋಧನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com