ಕಾಂಗ್ರೆಸ್ ಮುಖಂಡ ಮಣಿಶಂಕರ್ ಅಯ್ಯರ್ ಮತ್ತು ಸಲ್ಮಾನ್ ಖುರ್ಷೀದ್ (ಸಂಗ್ರಹ ಚಿತ್ರ)
ದೇಶ
ಅಯ್ಯರ್, ಖುರ್ಷಿದ್ ರಿಂದ ಐಎಸ್ಐ ಪ್ರಚಾರಕರಂತೆ ವರ್ತನೆ: ಬಿಜೆಪಿ
ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ಮತ್ತು ಸಲ್ಮಾನ್ ಖುರ್ಷಿದ್ ಪಾಕ್‍ನ ಐಎಸ್‍ಐ, ಐಎಸ್‍ನ ಪ್ರಚಾರಕರಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ...
ನವದೆಹಲಿ: ಕಾಂಗ್ರೆಸ್‍ನ ಮಣಿಶಂಕರ್ ಅಯ್ಯರ್ ಮತ್ತು ಸಲ್ಮಾನ್ ಖುರ್ಷಿದ್ ಪಾಕ್‍ನ ಐಎಸ್‍ಐ, ಐಎಸ್‍ನ ಪ್ರಚಾರಕರಂತೆ ವರ್ತಿಸುತ್ತಿದ್ದಾರೆಂದು ಬಿಜೆಪಿ ಆರೋಪಿಸಿದೆ.
ಭಾರತ -ಪಾಕ್ ನಡುವೆ ಶಾಂತಿ ಮಾತುಕತೆ ಮತ್ತೆ ಶುರುವಾಗಬೇಕಾದರೆ ಮೋದಿ ಅವರನ್ನು ಹುದ್ದೆಯಿಂದ ತೆಗೆಯಬೇಕು ಎಂಬ ಹೇಳಿಕೆ ನೀಡಿದ್ದ ಮಣಿಶಂಕರ್ ವಿರುದ್ಧ ಬಿಜೆಪಿ ನಾಯಕಿ ಮೀನಾಕ್ಷಿ ಲೇಖಿ ಕಿಡಿಕಾರಿದ್ದಾರೆ. ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸಿಗರು ಐಎಸ್‍ಐ ಏಜೆಂಟರಂತೆ ವರ್ತಿಸುತ್ತಿದ್ದಾರೆ. ಭಾರತ, ರಾಷ್ಟ್ರೀಯವಾದಿ ಮುಸ್ಲಿಮರಿಗೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ ಅಯ್ಯರ್ ಹೇಳಿಕೆಗೆ ಆರ್ ಜೆಡಿ ಕೂಡ ಆಕ್ಷೇಪಿಸಿದೆ. ರಾಜಕೀಯವಾಗಿ ಪರ ವಿರೋಧಗಳು ಇದ್ದದ್ದೇ. ಆದರೆ ಪ್ರಧಾನಿ ಮರ್ಯಾದೆ ತೆಗೆವ ಕೆಲಸ ಮಾಡಬಾರದು ಎಂದಿದೆ. ಕಾಂಗ್ರೆಸ್ ಮಾತ್ರ ಮಣಿಶಂಕರ್ ಅಯ್ಯರ್ ಅವರ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ