ಚೋಟಾ ರಾಜನ್‌
ಚೋಟಾ ರಾಜನ್‌

ಚೋಟಾ ರಾಜನ್ ಪ್ರಕರಣ ಶೀಘ್ರದಲ್ಲೇ ಸಿಬಿಐ ಹಸ್ತಾಂತರ

ಮುಂಬೈ ಗ್ಯಾಂಗ್‌ಸ್ಟರ್ ಚೋಟಾ ರಾಜನ್ ವಿರುದ್ಧವಿರುವ 71 ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಶೀಘ್ರದಲ್ಲೇ ಸಿಬಿಐಗೆ ಹಸ್ತಾಂತರ...
Published on
ಮುಂಬೈ: ಮುಂಬೈ ಗ್ಯಾಂಗ್‌ಸ್ಟರ್ ಚೋಟಾ ರಾಜನ್ ವಿರುದ್ಧವಿರುವ 71 ಪ್ರಕರಣಗಳನ್ನು ಮಹಾರಾಷ್ಟ್ರ ಪೊಲೀಸರು ಶೀಘ್ರದಲ್ಲೇ ಸಿಬಿಐಗೆ ಹಸ್ತಾಂತರಿಸಲಿದ್ದಾರೆ. ಈ ಬಗ್ಗೆ ಈ ವಾರವೇ ಡಿಪಾರ್ಟ್‌ಮೆಂಟ್ ಆಫ್ ಪರ್ಸನಲ್ ಆ್ಯಂಡ್ ಟ್ರೈನಿಂಗ್ ನೋಟಿಫಿಕೇಶನ್ ಕಳುಹಿಸಲಿದೆ. 
ರಾಜನ್‌ರ ಪ್ರಕರಣವನ್ನು ಹಸ್ತಾಂತರಿಸುವ ಬಗ್ಗೆ ಮಹಾರಾಷ್ಟ್ರ ಸರ್ಕಾರ ಈ ಹಿಂದೆಯೇ ನೋಟಿಫಿಕೇಶನ್ ಕಳಿಸಿತ್ತು ಎಂದು ಸಿಬಿಐ ಮೂಲಗಳು ಹೇಳಿವೆ.
ಚೋಟಾ ರಾಜನ್‌ರ ಇನ್ನಿತರ ಪ್ರಕರಣಗಳ ಜತೆ 2011ರಲ್ಲಿ ಹತ್ಯೆಗೀಡಾದ  ಮುಂಬೈಯ ಹಿರಿಯ ಪತ್ರಕರ್ತ ಜ್ಯೋತಿರ್ಮಯಿ ಡೇ ಅವರ ಪ್ರಕರಣವನ್ನೂ ಸಿಬಿಐಗೆ ಹಸ್ತಾಂತರಿಸಲಾಗುವುದು.
ಇಂಡೋನೇಷ್ಯಾದಿಂದ ಗಡಿಪಾರಾಗಿ ಬಂದ ಚೋಟಾ ರಾಜನ್‌ನ್ನು ನವೆಂಬರ್ 6 ರಂದು ಸಿಬಿಐ ಕಸ್ಟಡಿಗೆ ತೆಗೆದುಕೊಂಡಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com