ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೇಂದ್ರ ಬದ್ಧ: ನರೇಂದ್ರ ಮೋದಿ

ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೇಂದ್ರ ಬದ್ಧವಾಗಿದ್ದು, ಈ ವಿಚಾರದಲ್ಲಿ ವಿಫುಲ ಪಯತ್ನ ನಡೆಸಲು ಸಿದ್ಧರಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ...
ಪ್ರಧಾನಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
Updated on: 

ನವದೆಹಲಿ: ಭ್ರಷ್ಟಾಚಾರದ ವಿರುದ್ಧ ಹೋರಾಡಲು ಕೇಂದ್ರ ಬದ್ಧವಾಗಿದ್ದು, ಈ ವಿಚಾರದಲ್ಲಿ ವಿಫುಲ ಪಯತ್ನ ನಡೆಸಲು ಸಿದ್ಧರಿದ್ದೇವೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬುಧವಾರ ಹೇಳಿದ್ದಾರೆ.

ಈ ಕುರಿತಂತೆ ಜಾಗತಿಕ ಕೇಂದ್ರ ಬಿಂದು ಸಮ್ಮೇಳನ (ಜಿಎಫ್ ಪಿಸಿ) ದಲ್ಲಿ ಮಾತನಾಡಿರುವ ಅವರು, ಭ್ರಷ್ಟಾಚಾರ ತಡೆಗಟ್ಟಲು ಕೇಂದ್ರ ಸರ್ಕಾರ ನಿರ್ಣಾಯಕ ಕ್ರಮಗಳನ್ನು ಕೈ ಗೊಂಡಿದೆ. ಪ್ರಸ್ತುತ ಭ್ರಷ್ಟಾಚಾರ ಕುರಿತಂತೆ ಸುಪ್ರೀಂಕೋರ್ಟ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವೊಂದನ್ನು ನೇಮಿಸಲಾಗಿದ್ದು, ಭ್ರಷ್ಟಾಚಾರದಲ್ಲಿ ತೊಡಿಗಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ತೀರ್ಮಾನಿಸಲಾಗಿದೆ. ಭ್ರಷ್ಟಾಚಾರ ವಿಚಾರದಲ್ಲಿ ವಿಫುಲ ಯತ್ನ ನಡೆಸಲು ಸರ್ಕಾರ ಸಿದ್ಧವಿದೆ ಎಂದು ಹೇಳಿದ್ದಾರೆ.

ನಮ್ಮ ಕಾರ್ಯಾಚರಣೆ ಹಾಗೂ ಕೆಲಸಗಳು ಸಮೃದ್ಧ ಭಾರತ ನಿರ್ಮಾಣಕ್ಕಾಗಿ ಆಗಿದೆ. ಈ ವಿಚಾರದಲ್ಲಿ ಸಾಧನೆ ಸಾಧಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಭ್ರಷ್ಟಾಚಾರ ನಿರ್ಮೂಲನೆಯೇ ನಮ್ಮ ಪ್ರಮುಖ ತತ್ತ್ವವಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಇದೀಗ ಭಾರತವು ನಿರ್ಣಾಯಕ ಹಂತದಲ್ಲಿದ್ದು, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಅಗತ್ಯವಿದೆ.

ಹೀಗಾಗಿಯೇ ನಮ್ಮ ಸರ್ಕಾರ ಕಪ್ಪು ಹಣ ಕುರಿತಂತೆ ಹೋರಾಟ ನಡೆಸುತ್ತಿದೆ. ಪಾರದರ್ಶಕ ಹಾಗೂ ಉತ್ತರದಾಯಿ ಆಡಳಿತಕ್ಕಾಗಿ ಸರ್ಕಾರ ಕ್ರಮಗಳನ್ನು ಕೈಗೊಂಡಿದ್ದು, ಭ್ರಷ್ಟಾಚಾರ ನಿರ್ಮೂಲನೆಗೆ ಭದ್ರ ವೇದಿಕೆಯನ್ನು ನಿರ್ಮಿಸಲಾಗಿದೆ. ಪ್ಯಾರಿಸ್ ನಲ್ಲಿ ನಡೆದ ದಾಳಿಯು ಭಯೋತ್ಪಾದಕರು ತಮ್ಮ ಬಂಡವಾಳದ ಅಗತ್ಯತೆಯನ್ನು ಪೂರೈಸಲು ನಡೆಸುತ್ತಿರುವ ಉಗ್ರ ಕೃತ್ಯಗಳನ್ನು ತಡೆಗಟ್ಟಬೇಕು. ಹಣ ಪೂರೈಕೆಯಲ್ಲಿ ವಿಫಲವಾಗುತ್ತಿರುವ ದೇಶಗಳಲ್ಲಿ ಮಾದಕ ದ್ರವ್ಯ ಕಳ್ಳಸಾಗಣೆ, ಬ್ಯಾಂಕ್ ದರೋಡೆ, ವಾಹನ ದರೋಡೆ ಮತ್ತು ರಾಜ್ಯ ಪ್ರಾಯೋಜಿತ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದ ಅವರು, ಇದೇ ವೇಳೆ ಕೇಂದ್ರ ತನಿಖಾ ದಳ (ಸಿಬಿಐ) ಮತ್ತು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸಂಸ್ಥೆಗಳಲ್ಲಿ ವಿಶೇಷ ಸೇವೆ ಸಲ್ಲಿಸಿ ಪದಕ ಪಡೆದ ಅಧಿಕಾರಿಗಳಿಗೆ ಶುಭಾಶಯ ಕೋರಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com