ಮೆಟ್ಟಪುರ್ವಪಲ್ಲಿ(ಚಿತ್ತೂರು): ಕಾರು-ಸರ್ಕಾರಿ ಬಸ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಚಿತ್ತೂರಿನಲ್ಲಿ ಸಂಭವಿಸಿದೆ.
ಆಂಧ್ರದ ಚಿತ್ತೂರು ಜಿಲ್ಲೆಯ ಮೆಟ್ಟಪುರ್ವಪಲ್ಲಿ ಗ್ರಾಮದ ಬಳಿ ಈ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಐವರು ಸಾವನ್ನಪ್ಪಿದ್ದಾರೆ.
ಮೃತರನ್ನು ಕಾರು ಚಾಲಕ ವೇಣುಗೋಪಾಲ್(22), ಸುಮಿತ್ರ(25), ಕಾಳಮ್ಮ, ರಮಣಮ್ಮ ಹಾಗೂ 3 ವರ್ಷದ ಮೇನಕ ಎಂದು ತಿಳಿದುಬಂದಿದೆ.
ಬೈರೆಡ್ಡಿಪಲ್ಲಿಯಲ್ಲಿನ ವಿವಾಹ ಸಮಾರಂಭಕ್ಕೆಂದು ಕಾರಿನಲ್ಲಿ ಐವರು ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.