ನರೇಂದ್ರ ಮೋದಿ ಮತ್ತೊಮ್ಮೆ ಪ್ರಮಾಣ ವಚನ ಸ್ವೀಕರಿಸಬೇಕು: ಲಾಲೂ ಆಗ್ರಹ

ನರೇಂದ್ರ ಮೋದಿ ಅವರು ಕಳೆದ ವರ್ಷ ಮೇ 26ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಪ್ಪಾಗಿ ಉಚ್ಚರಿಸಿರುವುದರಿಂದ ಅವರು ಇನ್ನೊಮ್ಮೆ ಪ್ರಮಾಣ ವಚನ ಸ್ವೀಕರಿಸಬೇಕೆಂದು
ಲಾಲು ಪ್ರಸಾದ್‌ ಯಾದವ್‌ ಮತ್ತು ನರೇಂದ್ರ ಮೋದಿ
ಲಾಲು ಪ್ರಸಾದ್‌ ಯಾದವ್‌ ಮತ್ತು ನರೇಂದ್ರ ಮೋದಿ
Updated on: 

ಪಾಟ್ನಾ: ನರೇಂದ್ರ ಮೋದಿ ಅವರು ಕಳೆದ ವರ್ಷ ಮೇ 26ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಪ್ಪಾಗಿ ಉಚ್ಚರಿಸಿರುವುದರಿಂದ ಅವರು ಇನ್ನೊಮ್ಮೆ ಪ್ರಮಾಣ ವಚನ ಸ್ವೀಕರಿಸಬೇಕೆಂದು ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಪಟ್ಟು ಹಿಡಿದಿದ್ದಾರೆ.

ತಮ್ಮ ಪುತ್ರ ತೇಜ್‌ ಪ್ರತಾಪ್‌ ಬಿಹಾರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವಾಗ ತಪ್ಪಾಗಿ ಶಬ್ದಗಳನ್ನು ಉಚ್ಚರಿಸಿದರಿಂದ 2ನೇ ಬಾರಿ ಪ್ರಮಾಣ ವಚನ ಸ್ವೀಕರಿಸಿದ ಹಿನ್ನೆಲೆಯಲ್ಲಿ ಲಾಲೂ ಈ ರೀತಿ ಹೇಳಿದ್ದಾರೆ

ತೇಜ್‌ ಪ್ರತಾಪ್‌ ಪ್ರಮಾಣ ವಚನ ಸ್ವೀಕರಿಸುವಾಗ "ಅಪೇಕ್ಷಿತ್‌' ಎಂಬ ಪದವನ್ನು "ಉಪೇಕ್ಷೀತ್‌' ಎಂದಾಗಿಯೂ "ಜಬ್‌' ಎಂಬ ಪದವನ್ನು "ತಬ್‌' ಎಂದಾಗಿಯೂ ತಪ್ಪಾಗಿ ಉಚ್ಚರಿಸಿದ್ದರು. ಹಾಗಾಗಿ ರಾಜ್ಯಪಾಲರು ಪುನಃ ಪ್ರಮಾಣ ವಚನ ಸ್ವೀಕಾರದ ಆದೇಶ ನೀಡಿದ್ದರು.

ತಮ್ಮ ಪುತ್ರ ತೇಜ್‌ ಪ್ರತಾಪ್‌ ಯಡವಟ್ಟಿಗೆ ಮಾಧ್ಯಮ ಸೇರಿದಂತೆ ಹಲವರು ಲೇವಡಿ ಮಾಡಿದ್ದರು. ಹೀಗಾಗಿ ಆಕ್ರೋಶಗೊಂಡಿರುವ ಲಾಲು ಪ್ರಸಾದ್‌ ಯಾದವ್‌  ಪ್ರಧಾನಿ ಮೋದಿಯ ವಿರುದ್ಧ ತಿರುಗಿ ಬಿದ್ದಿದ್ದಾರೆ.

ಮೋದಿ ತಮ್ಮ ಪ್ರಮಾಣ ವಚನದಲ್ಲಿ "ಅಕ್ಶೂನ್'  ಎಂಬ ಪದವನ್ನು ಅರ್ಥವೇ ಬಾರದ ರೀತಿಯಲ್ಲಿ ಉಚ್ಚರಿಸಿದ್ದಾರೆ ಎಂಬುದನ್ನು ಸಾಬೀತು ಪಡಿಸುವ ವಿಡಿಯೋ ಕ್ಲಿಪ್ಪಿಂಗ್‌ ಅನ್ನು ಲಾಲು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾರೆ.

ದೇಶದ ಏಕತೆ, ಸಮಗ್ರತೆ, ಶಾಂತಿ, ಸಾಮರಸ್ಯಗಳನ್ನು ಯಥಾವತ್ತಾಗಿ ಕಾಪಾಡಿಕೊಂಡು ಹೋಗುವ ಪ್ರಮಾಣ ವಚನದಲ್ಲಿನ ಪದವನ್ನು ಮೋದಿ ಯಾವುದೇ ಅರ್ಥಬಾರದ ರೀತಿಯಲ್ಲಿ ತಪ್ಪಾಗಿ ಉಚ್ಚರಿಸಿದ್ದಾರೆ. ದೇಶದ ಏಕತೆ - ಸಮಗ್ರತೆಗಾಗಿ ಮತ್ತೆ ಪ್ರಮಾಣ ವಚನ ಸ್ವೀಕಾರ ಮಾಡಬೇಕು ಎಂದು ಲಾಲು ಪ್ರಸಾದ್ ಯಾದವ್ ಟ್ವೀಟರ್ ನಲ್ಲಿ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com