ದೂರುಗಳು ಬಂದ ಹಿನ್ನೆಲೆಯಲ್ಲಿ: ಸದ್ಯಕ್ಕೆ ಮತಗಟ್ಟೆಗಳಲ್ಲಿ ಕೈಬೆರಳಿಗೆ ಬ್ರಷ್‍ನ ಮೂಲಕ ಶಾಯಿಯನ್ನು ಅಚ್ಚುಕಟ್ಟಾಗಿ ಹಾಕಲಾಗುತ್ತಿಲ್ಲ ಎಂದು ಮತದಾರರು ಅದರಲ್ಲೂ ಯುವಕರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು. ಅಲ್ಲದೆ, ಮಾರ್ಕರ್ ಪೆನ್ನುಗಳನ್ನು ಸಂಗ್ರಹಿಸಿಡುವುದು ಮತ್ತು ಸಾಗಿಸುವುದು ಸುಲಭ. ಹೀಗಾಗಿ, ಆಯೋಗವು ಶಾಯಿ ಬಾಟಲಿ, ಬ್ರಷ್‍ನ ಜಾಗಕ್ಕೆ ಪೆನ್ನುಗಳನ್ನು ತರುವುದಕ್ಕೆ ಆಸಕ್ತಿ ವಹಿಸಿದೆ.