ನವದೆಹಲಿ: ಸರಕು ಹಾಗೂ ಸೇವೆಗಳ ತೆರಿಗೆ (ಜಿಎಸ್‍ಟಿ) ವಿಧೇಯಕ ವಿಚಾರದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆನಡೆಯುತ್ತಿರುವ ತಿಕ್ಕಾಟಕ್ಕೆ ಸಂಸತ್ತಿನ ಚಳಿಗಾಲದ ಅಧಿವೇಶ ನಕ್ಕೂ ಮೊದಲೇ ಅಂತ್ಯ ಹಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಜಿಎಸ್‍ಟಿ ವಿಧೇಯಕಕ್ಕೆ ಸಂಬಂಧಿಸಿ ಕಾಂಗ್ರೆಸ್ ನೀಡಿರುವ ಪ್ರಮುಖ ಬೇಡಿಕೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು `ಎನ್‍ಡಿಟಿವಿ' ವರದಿ ಮಾಡಿದೆ. ಜಿಎಸ್‍ಟಿ ವಿಧೇಯಕಕ್ಕೆ ಚಳಿಗಾಲದ ಅಧಿವೇಶನದಲ್ಲೇ ಒಪ್ಪಿಗೆ ಪಡೆಯಬೇಕೆಂಬುದು ಬಿಜೆಪಿ ಚಿಂತನೆ. ಆರ್ಥಿಕಸುಧಾರಣೆಗಳ ಪ್ರಮುಖ ಭಾಗವಾಗಿರುವ ಈ ವಿಧೇಯಕಕ್ಕೆ ಒಪ್ಪಿಗೆ ಪಡೆಯುವುದು ಸರ್ಕಾರಕ್ಕೆ ಅನಿವಾರ್ಯ. ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಹ್ಮಣ್ಯನ್ ಹಣಕಾಸುಸಚಿವ ಅರುಣ್ ಜೇಟ್ಲಿ ಮತ್ತು ಕಂದಾಯ ಕಾರ್ಯ ದರ್ಶಿ ಹಸ್ಮುಖ್ ಮತ್ತಿತರ ಹಣಕಾಸು ಸಚಿವಾಲಯದ ಅಧಿಕಾರಿಗಳ ಮುಂದೆ ಜಿಎಸ್‍ಟಿ ದರ ಇಳಿಕೆ ಸಂಬಂಧ ಸರ್ಕಾರದ ಯೋಜನೆಯನ್ನು ಮಂಡಿಸಿದ್ದಾರೆ.