ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮನೆ ಮೇಲೆ ಹಾರಾಡಿದ ಪಾಕ್ ಧ್ವಜ

ಎನ್ ಕೌಂಟರ್ ನಲ್ಲಿ ಹತರಾದ ಹಿಜ್'ಬುಲ್ ಮುಜಾಹೀದ್ದೀನ್'ನ ಮೂವರು ಉಗ್ರರ ಹುಟ್ಟೂರಾದ ಬಿಜ್'ಬೆಹರಾ ಗ್ರಾಮದಲ್ಲಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪೂರ್ವಿಕರ ಮನೆಯ ಮೇಲೆ ಪಾಕಿಸ್ತಾನ ಧ್ವಜ ಹಾರಾಡಿರುವುದಾಗಿ ತಿಳಿದುಬಂದಿದೆ...
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮನೆ ಮೇಲೆ ಹಾರಾಡಿದ ಪಾಕ್ ಧ್ವಜ (ಸಂಗ್ರಹ ಚಿತ್ರ)
ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮನೆ ಮೇಲೆ ಹಾರಾಡಿದ ಪಾಕ್ ಧ್ವಜ (ಸಂಗ್ರಹ ಚಿತ್ರ)

ಶ್ರೀನಗರ: ಎನ್ ಕೌಂಟರ್ ನಲ್ಲಿ ಹತರಾದ ಹಿಜ್'ಬುಲ್ ಮುಜಾಹೀದ್ದೀನ್'ನ ಮೂವರು ಉಗ್ರರ ಹುಟ್ಟೂರಾದ ಬಿಜ್'ಬೆಹರಾ ಗ್ರಾಮದಲ್ಲಿರುವ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪೂರ್ವಿಕರ ಮನೆಯ ಮೇಲೆ ಪಾಕಿಸ್ತಾನ ಧ್ವಜ ಹಾರಾಡಿರುವುದಾಗಿ ತಿಳಿದುಬಂದಿದೆ.

ಭದ್ರತಾ ಪಡೆಗಳ ಎನ್ ಕೌಂಟರ್ ನಲ್ಲಿ ಹತರಾದ ಉಗ್ರರ ಅಂತಿಮ ಯಾತ್ರೆ ವೇಳೆ ಸ್ಥಳದಲ್ಲಿ ನೂರಾರು ಜನರು ನೆರೆದಿದ್ದರು. ಈ ವೇಳೆ ಮುಖ್ಯಮಂತ್ರಿಯವರ ಮನೆಯ ಮೇಲೆ ಪಾಕಿಸ್ತಾನದ ಪ್ರತೀಕವಾಗಿರುವ ಹಸಿರು-ಬಿಳಿ ಧ್ವಜ ಹಾರುತ್ತಿರುವುದನ್ನು ಅಲ್ಲಿನ ಪ್ರತ್ಯಕ್ಷದರ್ಶಿಗಳು ಗಮನಿಸಿದ್ದಾರೆ. ಆದರೆ, ಈ ಕುರಿತಂತೆ ಅಲ್ಲಿನ ಪೊಲೀಸರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ.

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಪಿಡಿಪಿ ನಾಯಕ ವಹೀದ್ ಪರ್ರಾ ಅವರು ಪಾಕ್ ಧ್ವಜ ಹಾರಿದ್ದು ಮುಖ್ಯಮಂತ್ರಿ ಸಯೀದ್ ಅವರ ಪೂರ್ವಿಕರ ಮನೆಯ ಮೇಲೆ ಅಲ್ಲ. ಮನೆಯ ಕಾಂಪೌಂಡ್ ನ ಹೊರಭಾಗದಲ್ಲಿ. ಇಂತಹ ಘಟನೆಗಳಿಗೆ ಮಹತ್ವ ನೀಡಬೇಕಿಲ್ಲ. ಧ್ವಜ ಹಾರಿಸುವುದು ಇತ್ತೀಚಿನ ದಿನಗಳಲ್ಲಿ ಫ್ಯಾಷನ್ ಆಗಿ ಹೋಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಘಟನೆಗಳ ಬಗ್ಗೆ ಹೆಚ್ಚು ಪ್ರಚಾರ ದೊರೆಯುತ್ತಿರುವುದರಿಂದಲೇ ಇಂತಹ ಕೃತ್ಯಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಅನಂತ್ ನಾಗ್ ಜಿಲ್ಲೆಯ ಆಶ್ ಮೂಕಮ್ ಎಂಬ ಪ್ರದೇಶದಲ್ಲಿ ನಿನ್ನೆ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ಮೂವರು ಉಗ್ರರು ಹತರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com