ರಾಹುಲ್ ಗಾಂಧಿಯನ್ನು ಗಡಿಪಾರು ಮಾಡಬೇಕು: ಎಂ.ಎಲ್.ಶರ್ಮಾ

ರಾಹುಲ್ ಗಾಂಧಿಯನ್ನು ಬ್ರಿಟನ್ ದೇಶಕ್ಕೆ ಗಡಿಪಾರು ಮಾಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಎಂ.ಎಲ್ ಶರ್ಮಾ ಅವರು ಮಂಗಳವಾರ ಹೇಳಿದ್ದಾರೆ...
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)
ರಾಹುಲ್ ಗಾಂಧಿ (ಸಂಗ್ರಹ ಚಿತ್ರ)

ನವದೆಹಲಿ: ರಾಹುಲ್ ಗಾಂಧಿಯನ್ನು ಬ್ರಿಟನ್ ದೇಶಕ್ಕೆ ಗಡಿಪಾರು ಮಾಡಬೇಕೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿದಾರ ಎಂ.ಎಲ್ ಶರ್ಮಾ ಅವರು ಮಂಗಳವಾರ ಹೇಳಿದ್ದಾರೆ.

ರಾಹುಲ್ ಗಾಂಧಿ ಪೌರತ್ವ ವಿವಾದ ಕುರಿತಂತೆ ಸಲ್ಲಿಕೆಯಾಗಿದ್ದ ತುರ್ತು ಅರ್ಜಿ ವಿಚಾರಣೆಯನ್ನು ಸುಪ್ರೀಂ ನ್ಯಾಯಾಲಯ ನಿರಾಕರಿಸಿರುವ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ರಾಹುಲ್ ಗಾಂಧಿಯವರನ್ನು ಶಿಕ್ಷಿಸಬೇಕು ಮತ್ತು ಅವರನ್ನು ಭಾರತದಿಂದ ಬ್ರಿಟನ್ ದೇಶಕ್ಕೆ ಗಡಿಪಾರು ಮಾಡಬೇಕು. ಚುನಾವಣೆಯಲ್ಲಿ ರಾಹುಲ್ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಅವರು ಭಾರತೀಯ ನಾಗರೀಕನೆಂದು ಎಲ್ಲಿಯೂ ಘೋಷಿಸಿಕೊಂಡಿಲ್ಲ. ಈ ಬಗ್ಗೆ ಸಿಬಿಐ ತನಿಖೆ ನಡೆಯಬೇಕಿದೆ. ಈ ವಿಚಾರ ಕುರಿತಂತೆ ರಾಹುಲ್ ಗೆ ಐಪಿಸಿ ಸೆ.420 ಮತ್ತು 460ರ ಅಡಿಯಲ್ಲಿ ಶಿಕ್ಷೆ ನೀಡಬೇಕು. ಅವರನ್ನು ಭಾರತದಿಂದ ಮೂಲ ದೇಶಕ್ಕೆ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಪೌರತ್ವ ವಿಚಾರವೊಂದು ಎರಡು ರಾಷ್ಟ್ರಗಳಿಗೆ ಸಂಬಂಧಿಸಿದ್ದಾಗಿದ್ದು, ರಾಹುಲ್ ಗೆ ಸಂಬಂಧಿಸಿ ಸಲ್ಲಿಕೆಯಾಗಿರುವ ಎಲ್ಲಾ ದಾಖಲೆಗಳನ್ನು ಸರಿಯಾದ ರೀತಿಯಾದ ರೀತಿಯಲ್ಲಿ ತನಿಖೆ ನಡೆಯಬೇಕಿದೆ. ಈ ಕುರಿತಂತೆ ಕೂಡಲೇ ಸಿಬಿಐ ತನಿಖೆಯಾಗಬೇಕಿದೆ. ತಾನು ಬ್ರಿಟನ್ ಪ್ರಜೆ ಎಂಬುದಕ್ಕೆ ಸಾಕ್ಷಿಯಾಗಿ ಸ್ವತಃ ರಾಹುಲ್ ಅವರೇ ಸಹಿ ಮಾಡಿರುವ ಕೆಲವು ದಾಖಲೆಗಳಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com