ಅಸಹಿಷ್ಣುತೆ: ಅಮೀರ್ ಖಾನ್ ಹೇಳಿಕೆಗೆ ಸಂಗೀತ ನಿರ್ದೇಶಕ ರೆಹಮಾನ್ ಬೆಂಬಲ

ಅಸಹಿಷ್ಣುತೆ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ನೀಡಿರುವ ಹೇಳಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಎ.ಆರ್ ರೆಹಮಾನ್
ಎ.ಆರ್ ರೆಹಮಾನ್
Updated on: 

ನವದೆಹಲಿ: ಅಸಹಿಷ್ಣುತೆ ಬಗ್ಗೆ ಬಾಲಿವುಡ್ ನಟ ಅಮೀರ್ ಖಾನ್ ನೀಡಿರುವ ಹೇಳಿಕೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸಂದರ್ಶನವೊಂದರಲ್ಲಿ ಮಾತನಾಡಿರುವ ರೆಹಮಾನ್ ಮುಹಮ್ಮದ್: ಮೆಸೆಂಜರ್ ಆಫ್ ಗಾಡ್ ಚಿತ್ರಕ್ಕೆ ಸಂಗೀತ ನೀಡಿದ್ದಕ್ಕಾಗಿ ತಮ್ಮ ವಿರುದ್ಧ ಫತ್ವಾ ಹೊರಡಿಸಿದ್ದನ್ನು ನೆನಪಿಸಿಕೊಂಡಿದ್ದು, ಕೆಲವು ತಿಂಗಳ ಹಿಂದೆ ತಮಗೂ ಅಸಹಿಷ್ಣುತೆ ಅನುಭವವಾಗಿದೆ ಎಂದು ಹೇಳಿದ್ದಾರೆ.
ಅಸಹಿಷ್ಣುತೆ ವಿರುದ್ಧ ಪ್ರಾಜ್ಞವರ್ಗದ ಜನರು ನಡೆಸುತ್ತಿರುವ ಪ್ರತಿಭಟನೆ ಸರಿಯಾಗಿದೆ. ಭಾರತ ದೇಶದವರು ವಿಶ್ವಕ್ಕೇ ಮಾದರಿಯಾಗಿ ನಿಲ್ಲಬೇಕಾಗಿದೆ. ಪ್ರತಿಭಟನೆ ಹೆಸರಿನಲ್ಲಿ ಹಿಂಸಾಚಾರ ನಡೆಯುವುದು ಸರಿಯಲ್ಲ ಎಂದು ರೆಹಮಾನ್ ಹೇಳಿದ್ದಾರೆ.
ಯಾವುದೇ ರೀತಿಯ ಕ್ರಾಂತಿ ಸ್ವಾಗತಾರ್ಹ, ಆದರೆ ಬೀದಿಗಿಳಿದು ಬಡಿದಾಡುವುದು ಸರಿಯಲ್ಲ ಎಂದು ರೆಹಮಾನ್ ಅಭಿಪ್ರಾಯಪಟ್ಟಿದ್ದಾರೆ. ದೇಶದಲ್ಲಿ ಮುಸ್ಲಿಮರು ಅಭದ್ರತೆಯ ವಾತಾವರಣದಲ್ಲಿ ವಾಸಿಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ನಾನು ಈ ಪ್ರಶ್ನೆಗೆ ಉತ್ತರಿಸುವ ಸ್ಥಿತಿಯಲ್ಲಿ ಇಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com