ಶಾಸಕಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಬಿಜೆಪಿ ಶಾಸಕ ಅಮಾನತು

ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಂಬಾ ಬಗ್ಗೆ ಅಕ್ಷೇಪಾರ್ಹ ಭಾಷೆಯಲ್ಲಿ ಹೇಳಿಕೆ ನೀಡಿದ್ಧ ಆರೋಪದ ಮೇರೆಗೆ ಬಿಜೆಪಿ ಶಾಸಕ ಎಂ ಪ್ರಕಾಶ್ ಶರ್ಮಾ ಅವರನ್ನು ದೆಹಲಿ ವಿಧಾನಸಭೆಯಿಂದ ಎರಡು ದಿನಗಳ ಕಾರ ಅಮಾನತು ಮಾಡಲಾಗಿದೆ...
ಬಿಜೆಪಿ ಶಾಸಕ ಎಂ ಪ್ರಕಾಶ್ ಶರ್ಮಾ (ಸಂಗ್ರಹ ಚಿತ್ರ)
ಬಿಜೆಪಿ ಶಾಸಕ ಎಂ ಪ್ರಕಾಶ್ ಶರ್ಮಾ (ಸಂಗ್ರಹ ಚಿತ್ರ)

ನವದೆಹಲಿ: ಆಮ್ ಆದ್ಮಿ ಪಕ್ಷದ ಶಾಸಕಿ ಅಲ್ಕಾ ಲಂಬಾ ಬಗ್ಗೆ ಅಕ್ಷೇಪಾರ್ಹ ಭಾಷೆಯಲ್ಲಿ ಹೇಳಿಕೆ ನೀಡಿದ್ಧ ಆರೋಪದ ಮೇರೆಗೆ ಬಿಜೆಪಿ ಶಾಸಕ ಎಂ ಪ್ರಕಾಶ್ ಶರ್ಮಾ ಅವರನ್ನು ದೆಹಲಿ ವಿಧಾನಸಭೆಯಿಂದ ಎರಡು ದಿನಗಳ ಕಾರ ಅಮಾನತು ಮಾಡಲಾಗಿದೆ.

ಈ ಕುರಿತಂತೆ ಮಾತನಾಡಿರುವ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ಅವರು, ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ಓಂ ಪ್ರಕಾಶ್ ಶರ್ಮಾ ಅವರನ್ನು ದೆಹಲಿ ವಿಧಾನಸಭೆಯಿಂದ ಎರಡು ದಿನಗಳ ಅಮಾನತು ಮಾಡಲಾಗಿದೆ ಹಾಗೂ ಪ್ರಕರಣ ಕುರಿತಂತೆ ಮಾಹಿತಿಯನ್ನು ನೈತಿಕ ಸಮಿತಿಗೆ ಕಳುಹಿಸುವ ಬಗ್ಗೆ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರ ಸಲಹೆಯನ್ನು ಪಡೆಯಲಾಗುವುದು ಎಂದು ಹೇಳಿದ್ದಾರೆ.

ಹೇಳಿಕೆ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿ ಶಾಸಕ ಒ.ಪಿ.ಶರ್ಮಾ ಅವರ ಹೇಳಿಕೆ ಕೇಳಿ ನಿಜಕ್ಕೂ ಅಶ್ಚರ್ಯವಾಯಿತು. ಒಬ್ಬ ಶಾಸಕಿ ವಿರುದ್ಧ ಬಿಜೆಪಿ ಶಾಸಕ ಯಾವ ರೀತಿಯ ಭಾಷೆಯನ್ನು ಉಪಯೋಗಿಸಿದ್ದಾರೆ. ಯಾವ ರೀತಿಯಲ್ಲಿ ನಿಂದನೆ ಮಾಡಿದ್ದಾರೆ. ಶಾಸಕನ ಈ ಹೇಳಿಕೆ ವಿರುದ್ಧ ಬಿಜೆಪಿ ಕ್ರಮ ಕೈಗೊಳ್ಳುತ್ತದೆ ಎಂದು ನಾನು ನಂಬಿದ್ದೇನೆ ಎಂದು ಹೇಳಿದ್ದಾರೆ.

ದೆಹಲಿ ವಿಧಾನಸಭೆಯಲ್ಲಿ ರಾತ್ರಿ ಆಶ್ರಯವಿಲ್ಲದ ಜನರ ಆಶ್ರಯ ಕುರಿತಂತೆ ಸೋಮವಾರ ಗದ್ದಲ ಸೃಷ್ಟಿಯಾಗಿತ್ತು. ಈ ವೇಳೆ ಮನೀಶ್ ಸಿಸೋಡಿಯಾ ಹೇಳಿಕೆಯೊಂದನ್ನು ನೀಡಿದ್ದರು. ಈ ಹೇಳಿಕೆಗೆ ವಿರೋಧ ಪಕ್ಷದ ನಾಯಕ ವಿಜೇಂದ್ರ ಗುಪ್ತ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.  ಮಾರ್ಚ್ ನಿಂದ ಅಕ್ಟೋಬರ್ ವರೆಗೆ ದೆಹಲಿಯಲ್ಲಿ 3 ಸಾವಿನ ಜನರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರು. ಇದಕ್ಕುತ್ತರಿಸಿದ ಸಿಸೋಡಿಯಾ ರಾಷ್ಟ್ರಪತಿಯವರ ಆಡಳಿತದ ಅವಧಿಯಲ್ಲಿ ರಾತ್ರಿ ಆಶ್ರಯದ ಜವಾಬ್ದಾರಿ ಭದ್ರತಾ ಸಂಸ್ಥೆಯೊಂದಕ್ಕೆ ನೀಡಲಾಗಿತ್ತು ಎಂದು ಪ್ರತಿಪಾದಿಸಿದ್ದರು. ನಂತರ ಆಪ್ ಶಾಸಕಿ ಅಲ್ಕಾ ಲಂಬಾ ಕೂಡ ಚರ್ಚೆಯಲ್ಲಿ ಪಾಲ್ಗೊಂಡರು. ಈ ವೇಳೆ ನಗರದಲ್ಲಿ ಹೆಚ್ಚು ಮಂದಿ ಸಾವನ್ನಪ್ಪಿರುವುದು ಕೇವಲ ಚಳಿಯಿಂದ ಮಾತ್ರವೇ ಅಲ್ಲ, ಕೆಲವರು ಮಾದಕ ದ್ರವ್ಯ ಸೇವನೆ ಸಮಸ್ಯೆಯಿಂದಲೂ ಸಾವನ್ನಪ್ಪಿದ್ದಾರೆಂದು ಹೇಳಿದ್ದರು.

ಅಲ್ಕ ಲಂಬಾ ಹೇಳಿಕೆ ನೀಡುತ್ತಿದ್ದಂತೆ ಹೇಳಿಕೆಯನ್ನು ವಿರೋಧಿಸಿ ಬಿಜೆಪಿಯ ಮೂವರು ಶಾಸಕರು ಟೀಕಿಸಲು ಪ್ರಾರಂಭಿಸಿದ್ದಾರೆ. ಈ ವೇಳೆ ಬಿಜೆಪಿ ಶಾಸಕ ಒ.ಪಿ.ಶರ್ಮಾ 'ಯೇ ತೋ ರಾತ್ ಬಾಹರ್ ಘೂಮ್ ನೇ ವಾಲಿ' (ಇವಳು ರಾತ್ರಿಯಿಡೀ ಹೊರಗೆ ಓಡಾಡುವವಳು) ಎಂದು ಹೇಳಿದ್ದಾರೆ. ಈ ಹೇಳಿಕೆಗೆ ಆಪ್ ಶಾಸಕರು ಶರ್ಮಾ ವಿರುದ್ಧ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಅಲ್ಲದೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೇಲೆ ಸದನದಲ್ಲಿ ಭಾರೀ ಗದ್ದಲ ಏರ್ಪಟ್ಟಿತ್ತು. ಸದನದ ಬಾವಿಯಿಂದ ಹೊರಬರಲು ಎಷ್ಟು ಬಾರಿ ಹೇಳಿದರು ಆಪ್ ಶಾಸಕಿಯವರು ಹೊರಬರಲು ನಿರಾಕರಿಸಿದ ಕಾರಣ ಸದನವನ್ನು ಗುರುವಾರದವರೆಗೂ ಮುಂದೂಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com