ಅಲಕಾ ಲಾಂಬಾ ಸಹಾಯಕ್ಕೆ ಬಂದ ದೆಹಲಿ ಆಯೋಗ

ಆಪ್ ಶಾಸಕಿ ವಿರುದ್ದ ಬಿಜೆಪಿ ಶಾಸಕ ನೀಡಿದ್ದ ಹೇಳಿಕೆ ಕುರಿತಂತೆ ದೆಹಲಿ ಮಹಿಳಾ ಆಯೋಗ ಇದೀಗ ಅಲಕಾ ಲಾಂಬಾ ಅವರ ಸಹಾಯಕ್ಕೆ ಧಾವಿಸಿದ್ದು, ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದೆ ಎಂದು ಬುಧವಾರ ತಿಳಿದುಬಂದಿದೆ...
ಆಪ್ ಶಾಸಕಿ ಅಲಕಾ ಲಾಂಬಾ  (ಸಂಗ್ರಹ ಚಿತ್ರ)
ಆಪ್ ಶಾಸಕಿ ಅಲಕಾ ಲಾಂಬಾ (ಸಂಗ್ರಹ ಚಿತ್ರ)

ನವದೆಹಲಿ: ಆಪ್ ಶಾಸಕಿ ವಿರುದ್ದ ಬಿಜೆಪಿ ಶಾಸಕ ನೀಡಿದ್ದ ಹೇಳಿಕೆ ಕುರಿತಂತೆ ದೆಹಲಿ ಮಹಿಳಾ ಆಯೋಗ ಇದೀಗ ಅಲಕಾ ಲಾಂಬಾ ಅವರ ಸಹಾಯಕ್ಕೆ ಧಾವಿಸಿದ್ದು, ಶಾಸಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲು ನಿರ್ಧರಿಸಿದೆ ಎಂದು ಬುಧವಾರ ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಳಿವಾಳ್ಅವರು, ಶರ್ಮಾ ಅವರು ಮತ್ತೆ ತಮ್ಮ ತಪ್ಪನ್ನು ಪುನಾರಾವರ್ತಿಸಿದ್ದಾರೆ. ಆಯೋಗವು ಇದೀಗ ಅಲಕಾ ಲಾಂಬಾ  ಅವರ ಬೆಂಬಲಕ್ಕೆ ನಿಂತಿತ್ತು. ಅವರಿಗೆ ಸಹಾಯ ಮಾಡಲಿದೆ. ಶರ್ಮಾ ಅವರ ಈ ಪ್ರಕರಣವನ್ನು ಉನ್ನತ ಅಧಿಕಾರಗಳ ಬಳೆ ತೆಗೆದುಕೊಂಡು ಹೋಗಲಾಗುತ್ತದೆ ಎಂದು ಹೇಳಿದ್ದಾರೆ.

ಪ್ರಕರಣವು ರಾಜಕೀಯಕ್ಕೆ ಸಂಬಂಧಿಸಿದ್ದಾದರೂ ಓರ್ವ ಮಹಿಳೆ ಬಗ್ಗೆ ಈ ರೀತಿಯಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಹೇಳಿಕೆ ರಾಜಕೀಯವಲ್ಲ. ಮಹಿಳೆಯರನ್ನು ರಕ್ಷಣೆ ಮಾಡುವಂತಹ ವಿಧಾನಸಭೆಯಲ್ಲೇ ಈ ರೀತಿಯಾಗಿ ಮಹಿಳೆಯೊಬ್ಬರಿಗೆ ಅಪಮಾನವನ್ನು ಮಾಡಲಾಗಿದೆ. ಇದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡಿದೆ. ಮಹಿಳೆಯರನ್ನು ಯಾರೊಬ್ಬರು ಅವಮಾನ ಮಾಡುವಂತಿಲ್ಲ. ಒಂದು ವೇಳೆ ಮಾಡಿದ್ದರೂ ಅದರಿಂದ ಹೊರ ಹೋಗಲು ಸಾಧ್ಯವಿಲ್ಲ.

ಈ ರೀತಿಯ ಹೇಳಿಕೆ ನೀಡಿ ಜನರಿಗೆ ಯಾವ ರೀತಿಯ ಸಂದೇಶ ನೀಡಲು ಹೊರಟಿದ್ದಾರೆ ಬಿಜೆಪಿಯವರು. ಇದು ಪಕ್ಷಾತೀತ ಹೇಳಿಕೆಯಾಗಲು ಸಾಧ್ಯವಿಲ್ಲ. ಮಹಿಳೆಗೆ ಶಾಸಕರೊಬ್ಬರು ನೀಡಿರುವ ಹೇಳಿಕೆ ನಿಜಕ್ಕೂ ಖಂಡನೀಯವಾದದ್ದು, ಇದನ್ನು ನಾವು ವಿರೋಧಿಸುತ್ತೇವೆ ಎಂದು ಹೇಳಿದ್ದಾರೆ.

ಕಳೆದ ಬಾರಿಯೂ ಶರ್ಮಾ ಅವರು ಇದೇ ರೀತಿಯಾಗಿ ಮತ್ತೊಂದು ತಪ್ಪನ್ನು ಮಾಡಿದ್ದರು. ಪ್ರಕರಣ ಕುರಿತಂತೆ ನಾವು ಶರ್ಮಾ ವಿರುದ್ಧ ಎಫ್ಐಆರ್ ದಾಖಲಿಸಲು ಹೋದಾಗ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. ಶರ್ಮಾ ಅವರಿಗೆ ಪೊಲೀಸರೇ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com