ಮಳೆ ನೀರಿನಿಂದಾವೃತವಾದ ದೇವಾಲಯದ ರಸ್ತೆ
ದೇಶ
ತಿರುಪತಿಯಲ್ಲಿ ತಗ್ಗಿದ ಮಳೆಯಬ್ಬರ
ಅತೀವ ಮಳೆಯಿಂದ ಕಂಗೆಟ್ಟಿದ್ದ ತಿರುಪತಿಯಲ್ಲಿ ಮಂಗಳವಾರ ಪರಿಸ್ಥಿತಿ ಸುಧಾರಿಸಿದೆ. 3 ದಿನಗಳ ಕಾಲ ಮಳೆ ಸುರಿದು ಆತಂಕಕ್ಕೀಡಾಗಿದ್ದ ಭಕ್ತರು ನೆಮ್ಮದಿಯ...
ಚೆನ್ನೈ/ತಿರುಪತಿ: ಅತೀವ ಮಳೆಯಿಂದ ಕಂಗೆಟ್ಟಿದ್ದ ತಿರುಪತಿಯಲ್ಲಿ ಮಂಗಳವಾರ ಪರಿಸ್ಥಿತಿ ಸುಧಾರಿಸಿದೆ. 3 ದಿನಗಳ ಕಾಲ ಮಳೆ ಸುರಿದು ಆತಂಕಕ್ಕೀಡಾಗಿದ್ದ ಭಕ್ತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೇ ದಿನ ಸಾವಿರಾರು ಮಂದಿ ಪ್ರವಾಸಿಗರು ಹೋಟೆಲ್ ಗಳನ್ನು ತೆರವು ಮಾಡಿದ್ದಾರೆ. ಹೀಗಾಗಿ, ಹೊಸ ಪ್ರವಾಸಿಗರು ಬರಲಾರಂಭಿಸಿದ್ದಾರೆ.
ತಮಿಳುನಾಡಿನಾದ್ಯಂತ ಭಾರಿ ಮಳೆ ಮಂಗಳವಾರವೂ ಮುಂದುವರಿದಿದೆ. ಚೆನ್ನೈನಲ್ಲಿರುವ ರಾಜಭವನ ಸೇರಿದಂತೆ ಆಯಕಟ್ಟಿನ ಸ್ಥಳಗಳಿಗೆ ನೀರು ನುಗ್ಗಿದೆ. ತಾಂಬರಂ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 2 ಅಡಿ ಪ್ರವಾಹದ ನೀರು ಇತ್ತು ಎಂದು ವರದಿಯಾಗಿದೆ. ಮಹಾನಗರದ ಶಿಕ್ಷಣ ಸಂಸ್ಥೆಗಳಿಗೆ ರಜೆ ಘೋಷಿಸಲಾಗಿತ್ತು. ಮುಂದಿನ ಲ24 ಗಂಟೆಗಳಲ್ಲಿ ಧಾರಾಕಾರ ಮಳೆಯಾಗಲಿದೆ. ತಮಿಳುನಾಡಿನ ಹವಾಮಾನ ಇಲಾಖೆ ಪ್ರಕಾರ ವಾಯವ್ಯ ಮಾರುತದಿಂದ ಪ್ರಸಕ್ತ ಸಾಲಿ ನಲ್ಲಿ ಅಗತ್ಯಕ್ಕಿಂತ ಹೆಚ್ಚು ಮಳೆಯಾಗಿದೆ. ಪಾಪನಾಶಂನಲ್ಲಿ 18 ಸೆಂ.ಮೀ., ತಂಬರಂನಲ್ಲಿ 17 ಸೆಂ.ಮೀ. ಮಳೆಯಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ