ಏರ್'ಸೆಲ್ ನಿಂದ ಹೊಸ ಯೋಜನೆ: ರು.1ಕ್ಕೆ 2 ಗಂಟೆ ಟಾಕ್‌ಟೈಮ್‌

ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಗ್ರಾಹಕ ಗಮನ ಸೆಳೆಯಲು ಮೊಬೈಲ್ ಖಾಸಗಿ ದೂರ ಸಂಪರ್ಕ ಕಂಪನಿಗಳು ನಾನಾ ರೀತಿಯ ಕೊಡುಗೆಗಳನ್ನು ನೀಡಲು ಮುಂದಾಗುತ್ತಿವೆ. ಇದೀಗ ಗ್ರಾಹಕರನ್ನು ಸೆಳೆಯಲು ಮೊಬೈಲ್ ಸೇವೆ ಒದಗಿಸುತ್ತಿರುವ ಖಾಸಗಿ ದೂರಸಂಪರ್ಕ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದೆಹಲಿ: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದ್ದು, ಬಳಕೆದಾರರ ಗಮನ ಸೆಳೆಯಲು ಮೊಬೈಲ್ ಸೇವೆ ಖಾಸಗಿ ದೂರ ಸಂಪರ್ಕ ಕಂಪನಿಗಳು ನಾನಾ ರೀತಿಯ ಕೊಡುಗೆಗಳನ್ನು ನೀಡಲು ಮುಂದಾಗುತ್ತಿವೆ. ಇದೀಗ ಗ್ರಾಹಕರನ್ನು ಏರ್ ಸೆಲ್ ಗ್ರಾಹಕರಿಗಾಗಿ ಹೊಸ ಯೊಜನೆಯೊಂದನ್ನು ಜಾರಿಗೆ ತಂದಿದ್ದು, ಗ್ರಾಹಕರಿಗೆ ಕೇವಲ ರು.1 ಕ್ಕೆ 2 ಗಂಟೆಗಳ ಕಾಲ ಟಾಕ್ ಟೈಮ್ ನೀಡಲು ಮುಂದಾಗಿದೆ ಎಂದು ಗುರುವಾರ ತಿಳಿದುಬಂದಿದೆ.

ಈ ಯೋಜನೆಗೆ 'ಗುಡ್ ಮಾರ್ನಿಂಗ್ ಪ್ಯಾಕ್' ಎಂಬ ಹೆಸರಿದ್ದು, ಬಳಕೆದಾರರು ಕೇವಲ ರು.1 ನೀಡಿ ಬೆಳಿಗ್ಗೆ 6 ಗಂಟೆಯಿಂದ 8 ಗಂಟೆಯವರೆಗೂ ಮಾತನಾಡಬಹುದಾಗಿದೆ.
ಯೋಜನೆ ಬಳಸುವ ಬಳಕೆದಾರರು ಬೆಳಗ್ಗೆ 6 ಗಂಟೆ ನಂತರ ಕರೆ ಮಾಡಿದರೆ ಮೊದಲ ಕರೆಗೆ ರು.1.ನ್ನು ಕಂಪನಿ ಚಾರ್ಜ್ ಮಾಡುತ್ತದೆ. ಇದರ ಬಳಿಕ 8 ಗಂಟೆಯವರೆಗೆ ಬಳಕೆದಾರರು ಎಷ್ಟೇ ಮಾತನಾಡಿದರೂ ಹಣ ಕಡಿತಗೊಳ್ಳುವುದಿಲ್ಲ.

ಬಳಕೆದಾರರು ರು.1 ರೀಚಾರ್ಜ್ ಮಾಡಿಕೊಂಡು ಸಹ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ. ಪ್ರಸ್ತುತ ಈ ರಿಚಾರ್ಜ್ ಸೇವೆಯನ್ನು ಏರ್ ಸೆಲ್ ಕಂಪನಿಯು ದೇಶದ ಒಟ್ಟು 13 ಪ್ರದೇಶಗಳಿಗೆ ಒದಗಿಸಿದ್ದು, ಶೀಘ್ರದಲ್ಲಿಯೇ ಎಲ್ಲಾ ಪ್ರದೇಶಗಳಲ್ಲಿಯೂ ಸೇವೆಯೊದಗಿಸುವುದಾಗಿ ಹೇಳಿಕೊಂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com