
ನವದೆಹಲಿ: ಲಘು ಪೋಷಕಾಂಶಗಳ ತೀವ್ರ ಕೊರತೆಯಿಂದಾಗಿ ನವಜಾತ ಶಿಶುಗಳು, ಮಕ್ಕಳು, ಬಾಣಂತಿಯರು ಹಾಗೂ ಹಾಲುಣಿಸುವ ತಾಯಂದಿರು ತೊಂದರೆಗೆ ಸಿಲುಕುತ್ತಿರುವುದನ್ನು ತಪ್ಪಿಸಲು ಆಹಾರ ಭದ್ರತೆ ಕಾಯ್ದೆ ಜಾರಿಗೆ ಕೇಂದ್ರ ಸರ್ಕಾರ ಯೋಚಿಸುತ್ತಿದೆ.
ಅಪೌಷ್ಠಿಕತೆ ನಿವಾರಣೆಯ ಸದುದ್ದೇಶದ ಈ ಕಾಂಯ್ದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಮಂಡನೆಯಾಗಲಿದೆ. ಕಬ್ಬಿಣಾಂಶ, ಫಾಲಿಕ ಆ್ಯಸಿಡ್, ಲಘು ಪೋಷಕಾಂಶಗಳು, ವಿಟಾಮಿನ್‍ಗಳ ಕೊರತೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು ಕಾಂಯ್ದೆಯಲ್ಲಿರುತ್ತವೆ. ಸಮಗ್ರ ಶಿಶು ಅಭಿವೃದ್ಧಿ ಯೋಜನೆ, ಮಧ್ಯಾಹ್ನದ ಬಿಸಿಯೂಟ ಹಾಗೂ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಉದ್ದೇಶಿತ ಕುಟುಂಬಗಳನ್ನು ತಲುಪುವ ವಿಧಾನಗಳನ್ನು ಕಾಂಯ್ದೆ ಒಳಗೊಂಡಿದೆ.
Advertisement