ಗುಜರಾತ್: ಪಂಚಾಯತ್ ಚುನಾವಣೆ ಬಹಿಷ್ಕರಿಸಿದ ಗೊಜಾರಿಯಾ ಪಟ್ಟಣದ ಮತದಾರರು

ಗುಜರಾತ್ ನಲ್ಲಿ ತಾಲೂಕು ಪಂಚಾಯಿತಿ ಚುನಾವಣೆ ನಡೆದಿದ್ದು ಮೆಹಸಾನಾ ಜಿಲ್ಲೆಯ ಗೊಜಾರಿಯಾ ಪಟ್ಟಣದಲ್ಲಿ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.
ಪಂಚಾಯತ್ ಚುನಾವಣೆ ಬಹಿಷ್ಕರಿಸಿದ ಗೊಜಾರಿಯಾ ಪಟ್ಟಣದ ಮತದಾರರು
ಪಂಚಾಯತ್ ಚುನಾವಣೆ ಬಹಿಷ್ಕರಿಸಿದ ಗೊಜಾರಿಯಾ ಪಟ್ಟಣದ ಮತದಾರರು

ಮೆಹಸಾನಾ:ಗುಜರಾತ್ ನಲ್ಲಿ ತಾಲೂಕು ಪಂಚಾಯತ್ ಚುನಾವಣೆ ನಡೆದಿದ್ದು ಮೆಹಸಾನಾ ಜಿಲ್ಲೆಯ ಗೊಜಾರಿಯಾ ಪಟ್ಟಣದಲ್ಲಿ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಗೊಜಾರಿಯಾ ಪಟ್ಟಣವನ್ನು ತಾಲೂಕನ್ನಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಈಡೇರಿಸದ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರದ ವಿರುದ್ಧ ಆಕ್ರೋಶಗೊಂಡಿರುವ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ. ಬೆಳಿಗ್ಗೆ 8 ರಿಂದಲೇ ಮತದಾನ ಪ್ರಾರಂಭವಾಗಿತ್ತಾದರೂ, ಮಧ್ಯಾಹ್ನದ ವರೆಗೆ ಒಂದೇ ಒಂದು ಮತಚಲಾವಣೆಯಾಗಿರಲಿಲ್ಲ.

ಒಟ್ಟು 15 ,000 ಜನಸಂಖ್ಯೆ ಹೊಂದಿರುವ ಮೆಹಸಾನಾ ತಾಲೂಕಿನ ಗೊಜಾರಿಯಾದಲ್ಲಿ 10 ,000 ಮತದಾರರಿದ್ದು, ತಾಲೂಕಾಗಿ ಘೋಷಣೆ ಮಾಡುವುದಕ್ಕೆ ಅರ್ಹವಾಗಿದೆ ಎಂದು ಸ್ಥಳೀಯ ನಾಯಕ ರಾಜೇಂದ್ರ ಪಟೇಲ್ ಹೇಳಿದ್ದಾರೆ. ಕಳೆದ ಎರಡು ವರ್ಷದ ಹಿಂದೆಯೇ ಗೊಜಾರಿಯಾವನ್ನು ತಾಲೂಕಾಗಿ ಘೋಷಣೆ ಮಾಡುವ ಪ್ರಸ್ತಾವನೆಯನ್ನು ತಾತ್ವಿಕವಾಗಿ ಈಗಾಗಲೇ ಅಂಗೀಕರಿಸಲಾಗಿದೆ. ಆದರೆ ಇನ್ನೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಎಂದು ಪಟೇಲ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಕಠಿಣ ಸಂದೇಶ ರವಾನೆ ಮಾಡಬೇಕಿದ್ದ ಹಿನ್ನೆಲೆಯಲ್ಲಿ ಚುನಾವಣೆಯನ್ನು ಬಹಿಷ್ಕರಿಸಲಾಗಿದೆ ಎಂದು ರಾಜೆಂದ್ರ ಪಟೇಲ್ ಹೇಳಿದ್ದಾರೆ. ಇದು ಗೊಜಾರಿಯಾ ಕತೆಯಾದರೆ ಅಮ್ರೇಲಿ ಜಿಲ್ಲೆಯ ಸೌರಾಷ್ಟ್ರ ಭಾಗದಲ್ಲಿ ಮೂಲಸೌಕರ್ಯ ಇಲ್ಲದೇ ಇರುವುದಕ್ಕೆ ಆಕ್ರೋಶಗೊಂಡಿರುವ ಮತದಾರರು ಚುನಾವಣೆಯನ್ನು ಬಹಿಷ್ಕರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com