
ನವದೆಹಲಿ: ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಯೊಂದಿಗಿನ ಹಸ್ತಲಾಘವ ನಮ್ಮ ಪ್ರಧಾನಿ ಮೋದಿಯವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಶಿವಸೇನೆ ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಸಂಜಯ್ ರಾವತ್ ಅವರು, ಪ್ಯಾರೀಸ್ ನಡೆಯುತ್ತಿರುವ ಹವಾಮಾನ ಶೃಂಗಸಭೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನವಾಜ್ ಶರೀಫ್ ಅವರೊಂದಿಗೆ ತಾವೇ ಹೋಗಿ ಹಸ್ತಲಾಘವ ಮಾಡಿರುವುದು ಅವರಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಅಸಹಿಷ್ಣುತೆ ಎಂಬ ಕೂಗು ಇದೀಗ ದೇಶದೆಲ್ಲೆಡೆ ಕೇಳಿಬರುತ್ತಿದ್ದು, ಮೋದಿಯವರ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲೇ ಶೃಂಗಸಭೆಯಲ್ಲಿ ಪ್ರಧಾನಿ ಮೋದಿಯವರು ನವಾಜ್ ಶರೀಫ್ ಅವರನ್ನು ನೋಡಿದ ಕೂಡಲೇ ಅವರೇ ಸ್ವತಃ ನಡೆದುಕೊಂಡು ಹೋಗಿ ಶರೀಫ್ ಅವರಿಗೆ ಹಸ್ತಲಾಘವ ಮಾಡಿದರು. ಇದು ನಮ್ಮ ಪ್ರಧಾನಿಯಲ್ಲಿರುವ ಸಹಿಷ್ಣುತೆಯನ್ನು ಸೂಚಿಸುತ್ತದೆ.
ಭಯೋತ್ಪಾದನೆಯನ್ನು ಪ್ರಚಾರ ಮಾಡುವುದು ದೇಶದಲ್ಲಿ ದೊಡ್ಡ ಅಸಹಿಷ್ಣುತೆಯಾಗಿದೆ. ಅಂತಹುದ್ದನ್ನು ನವಾಜ್ ಶರೀಫ್ ಅವರು ಮಾಡಿದ್ದಾರೆ. ಮೊದಲು ಭಯೋತ್ಪಾದನೆ ಕುರಿತ ಚರ್ಚೆಗಳನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ.
Advertisement