ಶಾಸ್ತ್ರಿ ನಿಗೂಢ ಸಾವಿನ ಕಡತಗಳು ಬಯಲಾಗಲಿ: ನೇತಾಜಿ ಕುಟುಂಬ ಸದಸ್ಯರ ಆಗ್ರಹ

ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬ ಸದಸ್ಯರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ರಹಸ್ಯ ಬಯಲಾಗಬೇಕಾದರೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದಾರೆ.
ಚಂದ್ರ ಕುಮಾರ್ ಬೋಸ್
ಚಂದ್ರ ಕುಮಾರ್ ಬೋಸ್

ಕೋಲ್ಕತ್ತ: ನೇತಾಜಿ ಸುಭಾಷ್ ಚಂದ್ರ ಬೋಸ್ ಕುಟುಂಬ ಸದಸ್ಯರು ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ನಿಗೂಢ ಸಾವಿನ ರಹಸ್ಯ ಬಯಲಾಗಬೇಕಾದರೆ ರಹಸ್ಯ ಕಡತಗಳನ್ನು ಬಹಿರಂಗಪಡಿಸಲು ಒತ್ತಾಯಿಸಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿ ಭಾರತೀಯ ಹೆಮ್ಮೆಯ ಪುತ್ರರಲ್ಲೊಬ್ಬರು, ಭಾರತ ಕಂಡ ಶ್ರೇಷ್ಠ ಪ್ರಧಾನಿಗಳು. ತಾಷ್ಕೆಂಟ್ ನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ  ನಿಗೂಢವಾಗಿ ಸಾವನ್ನಪ್ಪಿದರು. ಅವರ ಸಾವಿನ ರಹಸ್ಯ ಈ ವರೆಗೂ ಬಯಲಾಗಿಲ್ಲ ಎಂದು ಸುಭಾಷ್ ಚಂದ್ರ ಬೋಸ್ ಅವರ ಸೋದರ ಸಂಬಂಧಿ ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.
ರಷ್ಯಾದಿಂದ ವಾಪಸ್ಸಾದ ನಂತರ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದಂತೆ ತನಿಖಾ ಆಯೋಗವನ್ನು ರಚಿಸುವುದಾಗಿ ನನ್ನ ತಂದೆ ಅಮಿಯಾನಾಥ್ ಬೋಸರಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ಭರವಸೆ ನೀಡಿದ್ದರು ಎಂದು ಫೇಸ್ ಬುಕ್ ನಲ್ಲಿ ಬರೆದಿದ್ದಾರೆ.
ರಷ್ಯಾದಿಂದ ವಾಪಸ್ಸಾಗುವುದಕ್ಕೂ ಮುನ್ನವೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ನಿಗೂಢ ಸಾವಿಗೀಡಾಗಿದ್ದರು, ಶಾಸ್ತ್ರಿ ಅವರ ನಿಗೂಢ ಸಾವಿನ ರಹಸ್ಯ ಬಯಲಾಗಬೇಕು ಎಂದು ಚಂದ್ರ ಕುಮಾರ್ ಬೋಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com