
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ವಿಜಯ್ ಘಾಟ್‍ಗೆ ತೆರಳಿ ಲಾಲ್‍ಬಹದ್ದೂರ್ ಶಾಸ್ತ್ರಿಯವರಿಗೆ ಗೌರವ ಸಲ್ಲಿಸಲಿಲ್ಲ. ಪ್ರಧಾನಿಯವರ ಈ ವರ್ತನೆ `ದುರದೃಷ್ಟಕರ' ಎಂದು ಕಾಂಗ್ರೆಸ್ ಟೀಕಿಸಿದೆ.
ಶಾಸ್ತ್ರಿ ಭಾರತದ ಪ್ರಧಾನಮಂತ್ರಿಯಾಗಿದ್ದವರು. ಅವರು ಯಾವುದೇ ಪಕ್ಷಕ್ಕೆ ಸೇರಿದವರಲ್ಲ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಕಾಂಗ್ರೆಸ್ ಅಧ್ಯಕ್ಷರು ಎಲ್ಲರೂ ಅಲ್ಲಿಗೆ ತೆರಳಿ ಗೌರವ ಸಲ್ಲಿಸಿರುವಾಗ, ಪ್ರಧಾನಿಗೆ ಏನು ಸಮಸ್ಯೆಯಾಗಿತ್ತೋ ಗೊತ್ತಿಲ್ಲ. ಗಾಂಧಿಯವರ ರಾಜ್ ಘಾಟ್‍ಗೆ ಸಮೀಪದಲ್ಲೇ ಅದು ಇತ್ತು ಎಂದು ಕಾಂಗ್ರೆಸ್ ವಕ್ತಾರ ಅಜಯ್ ಮಾಕನ್ ಟೀಕಿಸಿದರು. ಕಾಂಗ್ರೆಸ್ ಮುಖಂಡ ಮತ್ತು ಶಾಸ್ತ್ರಿಯವರ ಮಗ ಅನಿಲ್ ಶಾಸ್ತ್ರಿ, ಕಳೆದ ಐವತ್ತು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿಯೊಬ್ಬರು ವಿಜಯ್ ಘಾಟ್‍ಗೆ ಭೇಟಿ ನೀಡದೆ ಉಳಿದಿದ್ದಾರೆ ಎಂದು ಗುರುತಿಸಿದ್ದಾರೆ. ಆದರೆ, ಮೋದಿ ಟ್ವಿಟ್ಟರ್‍ನಲ್ಲಿ ಶಾಸ್ತ್ರಿಯವರಿಗೆ ಪ್ರಣಾಮ ಸಲ್ಲಿಸಿದ್ದಾರೆ.
Advertisement