
ನವದೆಹಲಿ: ಮುಂದಿನ ತಿಂಗಳು ಭಾರತದ ಮಾರುಕಟ್ಟೆಗೆಬರಲಿರುವ ಆ್ಯಪಲ್ 6S ಮತ್ತು 6S ಪ್ಲಸ್ ಐ ಫೋನ್ ಗಳನ್ನು ಕದ್ದು ಸಾಗಿಸುತ್ತಿದ್ದ 7 ಮಂದಿಯನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಿರುವ ಪೊಲೀಸರು ಅವರಿಂದ 182 ಆ್ಯಪಲ್ ಐ ಫೋನ್ ಗಳನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳಸಾಗಣೆ ಮಾಡುವ ಯುವಕರಿಗೆ ಹೆಚ್ಚಿನ ಹಣ ನೀಡಿ ಅವರಿಂದ ವಸ್ತುಗಳನ್ನು ಕದ್ದು ಸಾಗಮ ಮಾಡಿಸಲಾಗುತ್ತದೆ. ಮಾಹಿತಿ ಆಧಾರದ ಮೇಲೆ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಫೋನ್ ಗಳನ್ನು ಸೀಜ್ ಮಾಡಿದ್ದಾರೆ.
ಇತ್ತೀಚೆಗಷ್ಟೇ ಹಾಂಗ್ ಕಾಂಗ್ ಮತ್ತು ಸಿಂಗಾ ಪೂರ್ ಗಳಿಂದ ತಮ್ಮ ಬ್ಯಾಗೇಜ್ ನಲ್ಲಿ ಐ ಪೋನ್ ಗಳನ್ನು ಕದ್ದು ಸಾಗಿಸುತ್ತಿದ್ದ ಕೆಲ ಯುವಕರನ್ನು ಬಂಧಿಸಿದ್ದ ಪೊಲೀಸರು ಅವರಿಂದ 20 ಐ ಫೋನ್ ಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ಅಕ್ಟೋಬರ್ 16 ರಂದು ಆ್ಯಪಲ್ 6s ಮತ್ತು 6S ಪ್ಲಸ್ ಮಾಡೆಲ್ ಐ ಫೋನ್ ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಲು ಕಂಪನಿ ನಿರ್ಧರಿಸಿದೆ.
Advertisement