ಕಲ್ಲಿದ್ದಲು ಕಾರ್ಯದರ್ಶಿ ಶಿಫಾರಸ್ಸಿನ ಪ್ರಕಾರ ಆದೇಶ ನೀಡಿದ್ದೆ: ಮನಮೋಹನ್ ಸಿಂಗ್

ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಅವರ ಸಲಹೆಯ ಮೇರೆಗೆ ಹಿಂಡಾಲ್ಕೊ ಕಂಪನಿಗೆ ತಲಾಬಿರಾ-2 ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ
ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)
ಮನಮೋಹನ್ ಸಿಂಗ್(ಸಂಗ್ರಹ ಚಿತ್ರ)

ನವದೆಹಲಿ: ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಅವರ ಸಲಹೆಯ ಮೇರೆಗೆ ಹಿಂಡಾಲ್ಕೊ ಕಂಪನಿಗೆ ತಲಾಬಿರಾ-2 ಕಲ್ಲಿದ್ದಲು ನಿಕ್ಷೇಪವನ್ನು ಹಂಚಿಕೆ ಮಾಡಲು ಅನುಮೋದನೆ ನೀಡಿದ್ದಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಹಿಂಡಾಲ್ಕೊ ಕಂಪನಿಗೆ ಕಲ್ಲಿದ್ದಲು ಹಂಚಿಕೆ ಮಾಡುವಂತೆ ಒಡಿಶಾ ಮುಖ್ಯಮಂತ್ರಿಯ ನವೀನ್ ಪಟ್ನಾಯಕ್ ಅವರ ಮನವಿಯನ್ನು ಕಲ್ಲಿದ್ದಲು ಕಾರ್ಯದರ್ಶಿಯಾಗಿದ್ದ ಪಿಸಿ ಪಾರಖ್ ಹಾಗೂ ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಪರಿಶೀಲನೆ ನಡೆಸಿದ ನಂತರವೇ ಕಲ್ಲಿದ್ದಲು ಹಂಚಿಕೆಗೆ ಅನುಮೋದನೆ ನೀಡಿದ್ದೇನೆ ಎಂದಿದ್ದಾರೆ. ಹಿಂಡಾಲ್ಕೊ ಕಂಪನಿಯ ಮಹತ್ವದ ಯೋಜನೆಯೊಂದಕ್ಕೆ ಕಲ್ಲಿದ್ದಲು ಲಿಂಕೇಜ್ ಕಲ್ಪಿಸಬೇಕು ಎಂದಷ್ಟೇ ನವೀನ್ ಪಟ್ನಾಯಕ್ ಅಂದಿನ ಪ್ರಧಾನಿಗೆ ಬರೆದ ಪತ್ರದಲ್ಲಿ ಮನವಿ ಮಾಡಿದ್ದರು. ಅದನ್ನು ಸರ್ಕಾರ ಮಂಜೂರು ಮಾಡಿತ್ತು, ಆದಾಗ್ಯೂ ತಲಾಬಿರಾ-2 ಕಲ್ಲಿದ್ದಿಲಿನ ಷೇರಿನಲ್ಲಿ ಹಿಂಡಾಲ್ಕೊ ಕಂಪನಿಯನ್ನು ಪರಿಗಣಿಸಿದ್ದೇಕೆ ಎಂಬ ಸಿಬಿಐ ಪ್ರಶ್ನೆಗೆ ಉತ್ತರಿಸಿರುವ ಮನಮೋಹನ್ ಸಿಂಗ್, ಪ್ರಧಾನಿ ಕಾರ್ಯಾಲಯದ ಅಧಿಕಾರಿಗಳು ಹಾಗೂ ಕಾರ್ಯದರ್ಶಿಗಳ ಶಿಫಾರಸ್ಸನ್ನು ಆಧರಿಸಿ ಅನುಮೋದನೆ ನೀಡಲಾಯಿತು ಎಂದಿದ್ದಾರೆ.
ಕಲ್ಲಿದ್ದಲು ಲಿಂಕೇಜ್ ಪಡೆಯುವುದಕ್ಕಿಂತಲೂ ನಿಕ್ಷೇಪ ಪಡೆಯುವುದು ಹಿಂಡಾಲ್ಕೊ ಕಂಪನಿಗೆ ಲಾಭದಾಯಕವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com