ಭಾರತೀಯ ಸೇನೆ ರಾಜೀವ್ ಗಾಂಧಿ ಅಧಿಕಾರ ಕಸಿದುಕೊಳ್ಳಲು ಪಿತೂರಿ ನಡೆಸಿತು !

1987 ರಲ್ಲಿ ದಿವಂಗತ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ಭಾರತೀಯ ಸೇನೆ ಅವರಿಂದ ಅಧಿಕಾರ ಕಸಿದುಕೊಳ್ಳಲು ಪ್ರಯತ್ನ ನಡೆಸಿತ್ತು ...
ರಾಜೀವ್ ಗಾಂಧಿ
ರಾಜೀವ್ ಗಾಂಧಿ

ನವದೆಹಲಿ:  1987 ರಲ್ಲಿ ದಿವಂಗತ ರಾಜೀವ್ ಗಾಂಧಿ ಅವರು ಪ್ರಧಾನ ಮಂತ್ರಿಯಾಗಿದ್ದ ವೇಳೆ ಭಾರತೀಯ ಸೇನೆ ಅವರಿಂದ ಅಧಿಕಾರ ಕಸಿದುಕೊಳ್ಳಲು ಪ್ರಯತ್ನ ನಡೆಸಿತ್ತು ಎಂದು ನಿವೃತ್ತ ಸೇನಾ ಕಮಾಂಡರ್ ಪಿಎನ್ ಹೂನ್ ಹೇಳಿದ್ದಾರೆ.

ತಾವು ಬರೆದಿರುವ ದಿ ಅನ್ಟೋಲ್ಡ್ ಟ್ರುತ್ ಎಂಬ ಪುಸ್ತಕದಲ್ಲಿ ಈ ವಿಷಯ ಪ್ರಸ್ತಾಪಿರುವ ಹೂನ್ 80 ರ ದಶಕದ ರಾಜಕೀಯ ಹಾಗು ಹೋಗುಗಳನ್ನು ಬಹಿರಂಗ ಪಡಿಸಿದ್ದಾರೆ.

ಮೂರು ಪ್ಯಾರಾ ಮಿಲಿಟರಿ ತುಕಡಿಗಳ ಕಮಾಂಡೋಗಳು ದೆಹಲಿಗೆ ತೆರಳಿ ಸರ್ಕಾರವನ್ನು ತಮ್ಮ ವಶಕ್ಕೆ ತೆಗೆದು ಕೊಳ್ಳಲು ನಿರ್ಧರಿಸಿದ್ದರು ಎಂದು ಹೂನ್ ಪಸ್ತಕದಲ್ಲಿ ತಿಳಿಸಿದ್ದಾರೆ.

ಮಾಜಿ ಸೇನಾ ಮುಖ್ಯಸ್ಥ ಕೃಷ್ಣಸ್ವಾಮಿ ಸುಂದರ್ ಜೀ ಮತ್ತು ಜನರಲ್ ಎಸ್ ಎಫ್ ರೋಡ್ರಿಗ್ಯೂ ಈ ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಅವರು ಬಹಿರಂಗ ಪಡಿಸಿದ್ದಾರೆ.

1984 ರ ಸಿಖ್ ವಿರೋಧಿ ಗಲಭೆ ನಂತರ ರಾಜೀವ್ ಗಾಂಧಿ ನಿರ್ಲಕ್ಷ್ಯತನ ಮತ್ತು ಭ್ರಷ್ಟಾಚಾರದಿಂದ ರೋಸಿ ಹೋಗಿದ್ದ ಸೇನಾ ಮುಖ್ಯಸ್ಥರು ಈ ನಿರ್ಧಾರಕ್ಕೆ ಬಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ ಎಂದು ಸಹ ಅವರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com