ನಾಯಕನನ್ನು ಸ್ವಾಗತಿಸಲು ರಾಕೆಟ್‌ ಒಳಗೆ ಪಾರಿವಾಳ ಕಟ್ಟಿ ಉಡಾಯಿಸಿದ ಕೈ ಕಾರ್ಯಕರ್ತರು

ತಮ್ಮ ರಾಜಕೀಯ ನಾಯಕರನ್ನು ಸ್ವಾಗತಿಸಲು ವಿಚಿತ್ರವಾದ ಹೊಸ ತಂತ್ರವೊಂದನ್ನು ಕಾಂಗ್ರೆಸ್ ಕಾರ್ಯಕರ್ತರು ಕಂಡು ಹಿಡಿದಿದ್ದಾರೆ.
ರಾಕೆಟ್ ಒಳಗೆ ಪಾರಿವಾಳ ಕಟ್ಟುತ್ತಿರುವ ಕಾಾರ್ಯಕರ್ತರು
ರಾಕೆಟ್ ಒಳಗೆ ಪಾರಿವಾಳ ಕಟ್ಟುತ್ತಿರುವ ಕಾಾರ್ಯಕರ್ತರು

ಇಲೂರು: ತಮ್ಮ ರಾಜಕೀಯ ನಾಯಕರನ್ನು ಸ್ವಾಗತಿಸಲು ವಿಚಿತ್ರವಾದ ಹೊಸ ತಂತ್ರವೊಂದನ್ನು ಕಾಂಗ್ರೆಸ್ ಕಾರ್ಯಕರ್ತರು ಕಂಡು ಹಿಡಿದಿದ್ದಾರೆ.

ಕಾಂಗ್ರೆಸ್‌ ಕಾರ್ಯಕರ್ತರು ಜೀವಂತ ಪಾರಿವಾಳವನ್ನು ಕಾಂಗ್ರೆಸ್‌ ಫ್ಲ್ಯಾಗ್‌ ಸ್ಟಿಕರ್‌ ಒಳಗೆ ಕಟ್ಟಿ ಬಳಿಕ ಅದನ್ನು ರಾಕೆಟ್‌ನ ಒಳಗೆ ಇಟ್ಟು ಬೆಂಕಿ ಕೊಟ್ಟು ಹಾರಿ ಬಿಟ್ಟಿದ್ದಾರೆ. ರಾಕೆಟ್‌ನ ಒಳಗೆ ಜೀವಂತವಾಗಿ ಬಂಧಿಯಾಗಿರುವ ಪಾರಿವಾಳ ಆಗಸದಲ್ಲಿ ರಾಕೆಟ್‌ ಜತೆಗೆ ಸುಟ್ಟು ಭಸ್ಮವಾಗಿದೆ.

ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ಕೋವೂರು ಪಟ್ಟಣದಲ್ಲಿ ಮೂಕ ಪಕ್ಷಿಗೆ ಚಿತ್ರಹಿಂಸೆ ನೀಡಿ ಎಪಿಸಿಸಿ ಅಧ್ಯಕ್ಷ ಎನ್‌ ರಘುವೀರ ರೆಡ್ಡಿ  ಅವರಿಗೆ ಕಾಂಗ್ರೆಸ್‌ ಕಾರ್ಯಕರ್ತರು ಸ್ವಾಗತಿಸಿದ್ದಾರೆ.

ಈ ಬಗೆಯ ರಾಕೆಟ್‌  ಉಡಾಯಿಸಿದಾಗ ಅದರೊಳಗಿರುವ ಪಾರಿವಾಳಕ್ಕೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ; ಅಷ್ಟರೊಳಗಾಗಿ ಅದು ಆಗಸದಲ್ಲಿ ಹಾರಿ ಹೋಗುತ್ತದೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಸಮರ್ಥಿಸಿಕೊಂಜಿದ್ದಾರೆ. ಆದರೆ ಕಾಂಗ್ರೆಸ್‌ ಕಾರ್ಯಕರ್ತರು ಹಾರಿ ಬಿಟ್ಟಿರುವ ರಾಕೆಟ್‌ಗಳ ಪೈಕಿ ಕನಿಷ್ಠ ಎರಡು ಪಾರಿವಾಳಗಳು ಸುಟ್ಟು ಭಸ್ಮವಾಗಿದೆ ಎಂದು ಹೇಳಲಾಗಿದೆ. ಇಂದು ವಿಶ್ವ ಪ್ರಾಣಿ ದಿನ. ಈ ದಿನವೇ ಮೂಕ ಪ್ರಾಣಿ - ಪಕ್ಷಿಗಳನ್ನು ಚಿತ್ರಹಿಂಸೆಗೆ ಗುರಿಪಡಿಸಿ ಸಾಯಿಸುವ ವಿದ್ಯಮಾನ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರಿಂದಲೇ ನಡೆದಿರುವುದು ಆಘಾತಕಾರಿಯಾಗಿದೆ.

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ದಾದ್ರಿ ಕೊಲೆ ಸಂತ್ರಸ್ತ ಇಖ್‌ಲಾಕ್‌ ಕುಟುಂಬವನ್ನು ಕಂಡು ಸಂತಾಪ ವ್ಯಕ್ತಪಡಿಸಿದ್ದಾರೆ. ಅದರ ಮರುದಿನವೇ ಕಾಂಗ್ರೆಸ್‌ ಕಾರ್ಯಕರ್ತರು ಅಮಾನವೀಯತೆ ಪ್ರದರ್ಶಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com